ಪ್ರಧಾನಮಂತ್ರಿ ಶಾಹಿದ್ ಖಾಕನ್ ಅಬ್ಬಾಸಿ
ಇಸ್ಲಾಮಾಬಾದ್: ಪಾಕಿಸ್ತಾನ ರಾಷ್ಟ್ರೀಯ ಹಿಸಾಸಕ್ತಿಗಳೊಂದಿಗೆ ರಾಜಿಯಾಗದೆ ಭಾರತ ಮತ್ತು ಆಫ್ಘಾನಿಸ್ತಾನ ರಾಷ್ಟ್ರಗಳೊಂದಿಗೆ ಎಲ್ಲಾ ರೀತಿಯ ವಿಚಾರಗಳ ಕುರಿತಂತೆ ಮಾತುಕತೆ ನಡೆಸಲು ಸಿದ್ಧರಿದ್ದೇವೆಂದು ಪಾಕಿಸ್ತಾನ ಪ್ರಧಾನಮಂತ್ರಿ ಶಾಹಿದ್ ಖಾಕನ್ ಅಬ್ಬಾಸಿ ಮಂಗಳವಾರ ಹೇಳಿದ್ದಾರೆ.
ಪಾಕಿಸ್ತಾನದ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸಮಾನತೆಯ ಆಧಾರದ ಮೇಲೆ ಭಾರತವಾಗಲೀ ಅಥವಾ ಆಫ್ಘಾನಿಸ್ತಾನವಾಗಲೀ ಯಾವುದೇ ರಾಷ್ಟ್ರದ ಜೊತೆಗಾದರೂ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆಂದು ಹೇಳಿದ್ದಾರೆ.
ಇದೇ ವೇಳೆ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಅವರಿಗೆ ಸರ್ಕಾರ ಭದ್ರತೆಯನ್ನು ನೀಡುತ್ತಿದೆ ಎಂಬ ವರದಿಗಳಿಗೆ ಸ್ಪಷ್ಟನೆ ನೀಡಿರುವ ಅವರು, ಒಬ್ಬ ರಾಜಕೀಯ ನಾಯಕನಗೆ ಭದ್ರತೆ ನೀಡುವುದು ಸರ್ಕಾರದ ಕರರ್ತವ್ಯ ಎಂದು ತಿಳಿಸಿದ್ದಾರೆ.
ಕರಾಚಿಯಲ್ಲಿ ಶಾಂತಿ ಸ್ಥಾಪನೆಯಿಲ್ಲದೆಯೇ ಪಾಕಿಸ್ತಾನ ಪ್ರಗತಿಗೊಳ್ಳಲು ಸಾಧ್ಯವಿಲ್ಲ. ಪಕ್ಷ ಎಲ್ಲಿಯವರೆಗೂ ನನಗೆ ಬೆಂಬಲ ನೀಡುತ್ತದೆಯೇ ಅಲ್ಲಿಯವರೆಗೂ ದೇಶದ ಪ್ರಧಾನಿಯಾಗಿ ಮುಂದುವರೆಯುತ್ತೇನೆಂದು ತಿಳಿಸಿದ್ದಾರೆ.