ಕಿರಣ್ ಖೇರ್ 
ದೇಶ

ಚಂಡೀಗಢ ಯುವತಿಗೆ ಕಿರುಕುಳ: ರಾತ್ರಿಯಲ್ಲಿ ಹುಡುಗರನ್ನು ಮನೆಯಲ್ಲಿರಿಸಿ, ಹುಡುಗಿಯರನ್ನಲ್ಲ: ಕಿರಣ್ ಖೇರ್

ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ಅವರ ಪುತ್ರ ವಿಕಾಸ್ ಬರಾಲಾ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಪುತ್ರಿಗೆ ಕಿರುಕುಳ ನೀಡಿದ ಪ್ರಕರಣ ಇದೀಗ ದೇಶದಲ್ಲಿ

ನವದೆಹಲಿ: ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ಅವರ ಪುತ್ರ ವಿಕಾಸ್ ಬರಾಲಾ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಪುತ್ರಿಗೆ ಕಿರುಕುಳ ನೀಡಿದ ಪ್ರಕರಣ ಇದೀಗ ದೇಶದಲ್ಲಿ ಸಂಚಲನ ಮೂಡಿಸುತ್ತಿದ್ದು ಇದಕ್ಕೆ ಬಿಜೆಪಿ ಸಂಸದೆ ಕಿರಣ್ ಖೇರ್ ಅವರು ಕಿಡಿಕಾರಿದ್ದಾರೆ. 
ಈ ಪ್ರಕರಣ ಕುರಿತಂತೆ ಪರ ವಿರೋಧ ಹೇಳಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಅಸಮಧಾನ ವ್ಯಕ್ತಪಡಿಸಿದ ಕಿರಣ್ ಖೇರ್ ಅವರು ಬರೀ ಹುಡುಗಿಯರಿಗೆ ಮಾತ್ರ ನಿರ್ಬಂಧಗಳನ್ನು ಹಾಕುವುದು ಸರಿಯಲ್ಲ ಇಂತಹ ನಿರ್ಬಂಧಗಳನ್ನು ಹುಡುಗರಿಗೂ ಹಾಕಬೇಕು ಎಂದು ಹೇಳಿದ್ದಾರೆ. 
ಸಂಸತ್ ಭವನದ ಆವರಣದಲ್ಲಿ ಮಾತನಾಡಿದ ಕಿರಣ್ ಖೇರ್ ಅವರು ರಾತ್ರಿ ವೇಳೆ ಹುಡುಗರನ್ನು ಮನೆಯಲ್ಲಿ ಇರಿಸಬೇಕು. ರಾತ್ರಿ ವೇಳೆಯಲ್ಲಿ ಮಾತ್ರ ಇಂತಹ ಘಟನೆಗಳು ನಡೆಯುತ್ತಿದ್ದು ಹಗಲಿನಲ್ಲಿ ನಡೆಯುತ್ತಿಲ್ಲ? ಹೀಗಾಗಿ ಹುಡುಗರನ್ನು ರಾತ್ರಿ ವೇಳೆ ಹೊರಗಡೆ ಹೋಗದಂತೆ ನಿರ್ಬಂಧ ಹೇರಬೇಕು ಎಂದರು. 
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿ ವಿಕಾಸ್ ಬರಾಲಾ ಮತ್ತು ಆತನ ಸ್ನೇಹಿತ ಆಶೀಶ್ ನನ್ನು ಚಂಢಿಗಡ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 
ಕಳೆದ ವಾರ ಚಂಡೀಗಢದ ಯುವತಿ ವರ್ನಿಕಾ ಕುಂದು ಅವರ ಕಾರನ್ನು ಹಿಂಬಾಲಿಸಿ ವಿಕಾಸ್ ಬರಾಲಾ ಅವರು ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

ಕರ್ನಾಟಕದಲ್ಲಿ ತೀವ್ರ ಬರ: ತುರ್ತು ಮಧ್ಯಪ್ರವೇಶಿಸುವಂತೆ ಪ್ರಧಾನಿ ಮೋದಿಗೆ ಖರ್ಗೆ ಒತ್ತಾಯ; ಅಮಿತ್ ಶಾಗೆ ಪತ್ರ!

ಮಹತ್ವದ ಬೆಳವಣಿಗೆಯಲ್ಲಿ ಆಪ್ ಮಾಜಿ ವಕ್ತಾರೆ ಪ್ರಿಯಾಂಕಾ, ಮಾಜಿ ಶಾಸಕ ಶ್ಯಾಮ್ ಸುಂದರ್ ಸೇರಿ ಹಲವು ನಾಯಕರು ಕಾಂಗ್ರೆಸ್‌ ಸೇರ್ಪಡೆ!

Asian Games 2026: 'ಈಗ ಮಾಡು ಡಾಕ್ಯುಮೆಂಟರಿ': ಬುಮ್ರಾ ವೇಗದ ಹೊಡೆತಕ್ಕೆ ಪತರುಗುಟ್ಟಿದ ಪಾಕ್ ನಾಯಕ

ಮೈಸೂರು: ಕುಸಿದು ಬಿದ್ದ ದೀಪಾಲಂಕಾರದ ಬೃಹತ್ ಕಟೌಟ್; ವಿದ್ಯಾರ್ಥಿಗಳು ಪಾರು, ದಸರಾ ಆರಂಭದಲ್ಲೇ ತಪ್ಪಿದ ದೊಡ್ಡ ದುರಂತ!