ಗುಜಾರಾತ್ ರಾಜ್ಯಸಭೆ ಚುನಾವಣೆಯಲ್ಲಿ ರೋಚಕ ತಿರುವು: ಸೋನಿಯಾ ಆಪ್ತ ಅಹಮದ್ ಪಟೇಲ್'ಗೆ ಗೆಲುವು
ನವದೆಹಲಿ: ಭಾರೀ ಕುತೂಹಲ ಕೆರಳಿಸಿದ್ದ ಗುಜರಾತ್ ರಾಜ್ಯದ ಮೂರು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಈ ಹಿಂದೆಂದೂ ಕಂಡು ಕೇಳರಿಯದ ಹೈ ಡ್ರಾಮಾ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆಪ್ತ ಹಾಗೂ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರು ರೋಚಕ ಗೆಲುವು ಸಾಧಿಸಿದ್ದಾರೆ.
3 ಸ್ಥಾನಗಳ ಪೈಕಿ 2 ಸ್ಥಾನಗಳಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಗೆಲುವು ಖಚಿತವಾಗಿತ್ತು. ರಾಜ್ಯಸಭೆಗೆ 5ನೇ ಬಾರಿ ಪುನರಾಯ್ಕೆ ಬಯಸಿದ್ದ ಅಹಮದ್ ಪಟೇಲ್ ಗೆಲವು ಮಾತ್ರ ಕತ್ತಿಯ ಆಲುಗಿನ ಮೇಲಿನ ಆಟವಾಗಿತ್ತು. ನಿನ್ನೆ ನಡೆದ ಮತದಾನ ವೇಳೆ ನಿಯಮ ಉಲ್ಲಂಘನೆಗಳಾಗಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ನೀಡಿದ ದೂರು-ಪ್ರತಿದೂರಗಳಿಂದಾಗಿ ಮತ ಕಾರ್ಯ ವಿಳಂಬವಾಗಿತ್ತು
ತಡರಾತ್ರಿ 1 ಗಂಟೆಯವರೆಗೂ ದೂರುಗಳನ್ನು ಇತ್ಯರ್ಥಗೊಳಿಸುವಲ್ಲಿ ನಿರತರಾದ ಚುನಾವಣಾ ಆಯೋಗ 1.45ರ ಸುಮಾರಿಗೆ ಮತ ಎಣಿಕೆ ಪೂರ್ಣಗೊಳಿಸಿತು. ಈ ಬೆನ್ನಲ್ಲೇ ಅಹಮದ್ ಪಟೇಲ್ ಗೆಲವು ಸಾಧಿಸಿದ್ದಾರೆಂದು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಿಸಿದರು.
ಅಹಮದ್ ಪಟೇಲ್ ಅವರು ಸೋನಿಯಾ ಅವಗ ಆಪ್ತರಾಗಿದ್ದು, ಹೇಗಾದರೂ ಅಹಮದ್ ಪಟೇಲ್ ಅವರನ್ನು ಸೋಲಿಸಿ ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ಮರ್ಮಾಘಾತ ನೀಡಲು ಬಿಜೆಪಿ ಶತಾಯ ಗತಾಯ ಪ್ರಯತ್ನ ಮಾಡಿತ್ತು. ಅದಕ್ಕೆಂದೇ 3ನೇ ಸ್ಥಾನಕ್ಕೆ ತನ್ನ ಅಭ್ಯರ್ಥಿಯಾಗಿ ಬಲವಂತ ಸಿಂಗ್ ರಜಪೂತ್ ಅವರನ್ನು ಕಣಕ್ಕಿಳಿಸಿ ಪಟೇಲ್ ರನ್ನು ಸೋಲಿಸಲು ಯತ್ನ ನಡೆಸಿತ್ತು.
ಆದರೆ, ಕೊನೆಯ ಕ್ಷಣದಲ್ಲಿ ಬಿಜೆಪಿಯ ಲೆಕ್ಕಾಚಾರ ತಲೆಕೆಳಗಾಗಿತು. ಬಿಜೆಪಿ ಪರ ವಿಪ್ ಇದ್ದರೂ ಜೆಡಿಯು ಹಾಗೂ ಎನ್'ಸಿಪಿಯ ತಲಾ ಓರ್ವ ಶಾಸಕರು ಕಾಂಗ್ರೆಸ್ ಪರ ಮತ ಚಲಾಯಿಸುವುದರೊಂದಿಗೆ ಪಟೇಲ್ ಅವರ ಗೆಲವುಗೆ ಬೆಕಾದ 44 ಮತಗಳು ಸಲೀಸಾಗಿ ಲಭಿಸಿದವು. ಜೊತೆಗ, ರಹಸ್ಯ ಮತದಾನದ ನಿಯಮ ಉಲ್ಲಂಘಿಸಿದ ಬಂಡಾಯ ಕಾಂಗ್ರೆಸ್ಸಿಗ ಶಂಕರಸಿಂಗ್ ವಘೇಲಾ ಅವರ ಬಣಕ್ಕೆ ಸೇರಿದ 2 ಬಂಡಾಯ ಕಾಂಗ್ರೆಸ್ ಶಾಸಕರ ಮತಗಳನ್ನು ಚುನಾವಣಾ ಆಯೋಗವು ಕಾಂಗ್ರೆಸ್ ದೂರಿನ ಅನ್ವಯ ಅಮಾನ್ಯ ಮಾಡಿತು. ಹೀಗಾಗಿ ಪಟೇಲ್ ಅವರು ಕೂದಲೆಳೆ ಅಂತರದಲ್ಲಿ ಗೆಲವು ಸಾಧಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos