ಪಾಟ್ನಾ: ಗುಜರಾತ್ ನ ಜೆಡಿಯು ಕಾರ್ಯದರ್ಶಿ ಅರುಣ್ ಶ್ರೀವಾಸ್ತವ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಹಿನ್ನೆಲೆಯಲ್ಲಿ ಅವರನ್ನು ಪಕ್ಷದ ಹುದ್ದೆಯಿಂದ ವಜಾಗೊಳಿಸಲಾಗಿದೆ.
ರಾಜ್ಯಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಗುಜರಾತ್ ವಿಧಾನಸಭೆಯಲ್ಲಿ ಚುನಾವಣಾ ಏಜೆಂಟ್ ನೇಮಕಕ್ಕೆ ಸಂಬಂಧಿಸಿದಂತೆ ರಿಟರ್ನಿಂಗ್ ಆಫೀಸರ್ ಗೆ ಬರೆದಿದ್ದಕ್ಕಾಗಿ ಕಾರ್ಯದರ್ಶಿ ಅರುಣ್ ಶ್ರೀವಾಸ್ತವ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಕ್ಷದ ಮುಖಂಡ ಕೆಸಿ ತ್ಯಾಗಿ, ಕಾರ್ಯದರ್ಶಿ ಹುದ್ದೆಯಿಂದ ಅರುಣ್ ಶ್ರೀವಾಸ್ತವ ಅವರನ್ನು ವಜಾಗೊಳಿಸಿರುವುದನ್ನು ಸ್ಪಷ್ಟಪಡಿಸಿದ್ದಾರೆ.
ಗುಜರಾತ್ ನ ಏಕೈಕ ಜೆಡಿಯು ಶಾಸಕ ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೇ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಕೈ ಜೋಡಿಸಿರುವುದನ್ನೂ ಸಹ ಶಾಸಕ ಛೋಟುಭಾಯ್ ವಸಾವ ಅವರು ಪ್ರಶ್ನಿಸಿದ್ದರು.