ಸೋನಾರ್ಪುರ: ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು ಕಳೆದ ಎರಡು ವರ್ಷಗಳಿಂದ ಯಾವುದೇ ಕೆಲಸ ಸಿಗದಿದ್ದ ಕಾರಣ ಕೊನೆಗೆ ಹೌಸ್‍ಕೀಪಿಂಗ್ ಕೆಲಸದ ಸಂದರ್ಶನಕ್ಕೆ ಹೋಗಿ ಬಂದ ನಂತರ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸೋನಾರ್ಪುರದ ನತುನ್ ಪಲ್ಲಿಯ ಮೂವತ್ತು ವರ್ಷದ ಅತನು ಮಿಸ್ತ್ರಿ ಆತ್ಮಹತ್ಯೆಗೆ ಶರಣಾದ ಯುವಕ. ಬಿಎಡ್ ಡಿಗ್ರಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದ ಅತನು ಕಳೆದ ಎರಡು ವರ್ಷಗಳಿಂದ ಕೆಲಸಕ್ಕಾಗಿ ಅಳೆದು ಸುತ್ತಾಗಿದ್ದಾನೆ. ಕೊನೆಗೂ ಖಾಸಗಿ ಕಂಪನಿಯಲ್ಲಿ ಹೌಸ್‍ಕೀಪಿಂಗ್ ಕೆಲಸದ ಸಂದರ್ಶನಕ್ಕೆ ಹೋಗಿ ಬಂದಿದ್ದಾನೆ. ತನ್ನ ಯೋಗ್ಯತೆಗೆ ತಕ್ಕ ಉದ್ಯೋಗ ಸಿಗಲಿಲ್ಲ ಎಂಬ ಕಾರಣಕ್ಕೆ ಮಿಸ್ತ್ರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆತ್ಮಹತ್ಯೆಗೂ ಮುನ್ನ ಮಿಸ್ತ್ರಿ ತನ್ನ ತಾಯಿ ಉಷಾ ಅವರಿಗೆ ಸ್ನಾತಕೋತ್ತರ ಪದವಿ ಇದ್ದರೂ ನಾನು ಹೌಸ್‍ಕೀಪಿಂಗ್ ಕೆಲಸ ಮಾಡಬೇಕೆ? ಎಂದು ಹೇಳಿ ತನ್ನ ಕೋಣೆಯನ್ನು ಸೇರಿದ್ದಾನೆ. ಆ ನಂತರ ಮಿಸ್ತ್ರಿ ಸಿಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಬಗ್ಗೆ ಮಾತನಾಡಿದ ಮಿಸ್ತ್ರಿ ತಂದೆ ಚಂದ್ರಕಾಂತ ಅವರು ಕಳೆದ ಎರಡು ವರ್ಷಗಳಿಂದ ಶಿಕ್ಷಕರ ಪರೀಕ್ಷೆ ಬರೆದಿದ್ದ ಆದರೆ ಯಾವುದೇ ಕೆಲಸ ಸಿಕ್ಕಿರಲಿಲ್ಲ. ಆದರೆ ಆತನ ವಯಸ್ಸಿನವರು ಪರೀಕ್ಷೆ ಪಾಸಾಗಿ ಕೆಲಸಕ್ಕೆ ತೆರಳುತ್ತಿದ್ದುದ್ದನ್ನು ನೋಡಿದ ಆತ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಿದ್ದಾರೆ.