ನವದೆಹಲಿ: ರಾಜಕೀಯದ ಅಜೆಂಡಾ ಅಭಿವೃದ್ಧಿಯಾಗಿದೆ. ಭಾರತ ವಿಶ್ವದಲ್ಲಿಯೇ ಅತ್ಯಂತ ಸಹಿಷ್ಣು ದೇಶ. ಪರಸ್ಪರ ಗೌರವಿಸುವುದು ಭಾರತೀಯರ ಧಾರ್ಮಿಕತೆಯಾಗಿದೆ. ರಾಜಕೀಯ ಉದ್ದೇಶಕ್ಕಾಗಿ ಜನರು ಅಲ್ಪಸಂಖ್ಯಾತ ಸಮಸ್ಯೆಗಳನ್ನು ಬಳಸಲು ಪ್ರಯತ್ನಿಸುತ್ತಾರೆ ಎಂದು ಉಪ ರಾಷ್ಟ್ರಪತಿಯಾಗಿ ಆಯ್ಕೆಗೊಂಡಿರುವ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ದುರದೃಷ್ಣವಶಾತ್ ಕೆಲವರು ಅಲ್ಪಸಂಖ್ಯಾತ ವಿಷಯವನ್ನು ದುರುದ್ದೇಶಪೂರ್ವಕವಾಗಿ ಬಳಸಿಕೊಂಡು ರಾಷ್ಟ್ರಮಟ್ಟದಲ್ಲಿ ಅದನ್ನು ತೆಗೆದುಕೊಂಡು ಹೋಗುವ ಮೂಲಕ ಅಪಪ್ರಚಾರವೆಸಗಲು ಪ್ರಯತ್ನಿಸುತ್ತಾರೆ ಎಂದರು.
ದೇಶದಲ್ಲಿ ಮುಸಲ್ಮಾನರಿಗೆ ಅಭದ್ರತೆ ಕಾಡುತ್ತಿದೆ. ಅವರಿಗೆ ಬದುಕಲು ಕಷ್ಟವಾಗುತ್ತಿದೆ ಎಂದು ನಿರ್ಗಮಿತ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿದ್ದರ ಹಿನ್ನೆಲೆಯಲ್ಲಿ ವೆಂಕಯ್ಯ ನಾಯ್ಡು ಹೀಗೆ ಹೇಳಿದರು.