ದೇಶ

ಪ್ರಧಾನಿ ಮೋದಿ ದೇಶದ ಬಗ್ಗೆ ಮಾತನಾಡಿದರೆ, ಸೋನಿಯಾ ಕುಟುಂಬದ ಬಗ್ಗೆ ಮಾತನಾಡಿದರು: ಸ್ಮೃತಿ ಇರಾನಿ

Srinivas Rao BV
ನವದೆಹಲಿ: ಕ್ವಿಟ್ ಇಂಡಿಯಾ ಚಳುವಳಿಯ 75 ನೇ ವಾರ್ಷಿಕೋತ್ಸವದ ಅಂಗವಾಗಿ ಲೋಕಸಭಾ ಕಲಾಪದಲ್ಲಿ ಮಾತನಾಡಿದ್ದ ವೇಳೆ ಆರ್ ಎಸ್ಎಸ್ ಬಿಜೆಪಿ ವಿರುದ್ಧ ಟೀಕಾ ಪ್ರಕಾರ ಮಾಡಿದ್ದ ಸೋನಿಯಾ ಗಾಂಧಿಯ ಭಾಷಣವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ. 
ಫೇಸ್ ಬುಕ್ ಪೋಸ್ಟ್ ನಲ್ಲಿ ಸೋನಿಯಾ ಗಾಂಧಿ ಅವರ ಭಾಷಣವನ್ನು ಟೀಕಿಸಿರುವ ಸ್ಮೃತಿ ಇರಾನಿ, ಕ್ವಿಟ್ ಇಂಡಿಯಾ ಚಳುವಳಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸೋನಿಯಾ ಗಾಂಧಿ ಅವರ ಭಾಷಣವನ್ನು ಹೋಲಿಕೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರೆ, ಸೋನಿಯಾ ಗಾಂಧಿ ಕುಟುಂಬ ಸದಸ್ಯರನ್ನು ನೆನಪಿಸಿಕೊಂಡಿದ್ದಾರೆ, ಈ ಮೂಲಕ ರಕ್ತ ನೀರಿಗಿಂತ ಗಟ್ಟಿಯಾದದ್ದು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ. 
ಶ್ರೇಷ್ಠ ನಾಯಕರು, ಶ್ರೇಷ್ಠ ಅನುಯಾಯಿಗಳೂ ಆಗಿರುತ್ತಾರೆ, ಇಡಿ ದೇಶ ಕ್ವಿಟಿ ಇಂಡಿಯಾ ಚಳುವಳಿಯ ಮಾಡು ಇಲ್ಲವೇ ಮಡಿ ಅಡಿ ಬರಹವನ್ನು ನೆನಪಿಸಿಕೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಸಹ ಇದೇ ಸಿದ್ಧಾಂತವನ್ನು ನೆನಪಿಸಿ ದೇಶದ ಬಗ್ಗೆ ಮಾತನಾಡಿದರೆ ಸೋನಿಯಾ ಗಾಂಧಿ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ ಎಂದು ಸ್ಮೃತಿ ಇರಾನಿ ಟೀಕಿಸಿದ್ದಾರೆ.  
SCROLL FOR NEXT