ನವದೆಹಲಿ: ವಿಕಲ ಚೇತನ ಮಕ್ಕಳ ಸಂಜ್ಞಾ ಭಾಷೆಯಲ್ಲಿರುವ ರಾಷ್ಟ್ರಗೀತೆಯ ಹೊಸ ವಿಡಿಯೋವನ್ನು ಕೇಂದ್ರ ಸಚಿವ ಮಹೇಂದ್ರ ನಾಥ್ ಪಾಂಡೆ ಬಿಡುಗಡೆ ಮಾಡಿದ್ದಾರೆ.
ಮೂರು ನಿಮಿಷಗಳ ವಿಡಿಯೋವನ್ನು ಗೋವಿಂದ ನಿಹಲಾನಿ ನಿರ್ದೇಶಿಸಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ವಿಕಲಾಂಗ ಚೇತನ ಮಕ್ಕಳ ಜೊತೆ ಕೆಂಪುಕೋಟೆಯಿರುವ ಬ್ಯಾಕ್ ಗ್ರೌಂಡ್ ನಲ್ಲಿ ಹಾಡಿಗೆ ಸಂಜ್ಞಾ ಭಾಷೆಯಲ್ಲಿ ಅಭಿನಯಿಸಿದ್ದಾರೆ.
ದೈಹಿಕವಾಗಿ ಅಂಗವಿಕಲರಾಗಿರುವ ಮಕ್ಕಳನ್ನು ವಿಕಲಾಂಗರೆನ್ನದೇ ಸರ್ಕಾರ ಅವರನ್ನು ದಿವ್ಯಾಂಗ ಮಕ್ಕಳೆಂದು ಕರೆಯುತ್ತಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವ ಮಹೇಂದ್ರ ನಾಥ್ ಪಾಂಡೆ ಹೇಳಿದ್ದಾರೆ.
ದೇಶದ ಅಭಿವೃದ್ಧಿಗೆ ದಿವ್ಯಾಂಗಜ್ಞಾನ್ ಅವಶ್ಯಕತೆಯಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದಿವ್ಯಾಂಗಜ್ಞಾನ ಅವಿಭಾಜ್ಯ ಅಂಗವಾದಾಗ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಮೋದಿ ಹೇಳಿರುವುದಾಗಿ ಅವರು ಸ್ಮರಿಸಿದರು. ಸಂಜ್ಞಾ ಭಾಷೆಯಲ್ಲಿ ರಾಷ್ಟ್ರಗೀತೆ ನೋಡುವುದು ಹೆಮ್ಮೆಯ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ವಿಡಿಯೋವನ್ನು ಗೋವಾ, ಭೂಪಾಲ್ ಮತ್ತು ಚಂಡಿಗಡ ಮತ್ತು ಕೊಲ್ಹಾಪುರಗಳಲ್ಲಿ ಬಿಡುಗಡೆ ಮಾಡಲಾಗಿದೆ.