ವಿರೋಧ ಪಕ್ಷಗಳ ನಾಯಕ ಗುಲಾಂ ನಬಿ ಆಜಾದ್ 
ದೇಶ

ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿ: ಉಪ ರಾಷ್ಟ್ರಪತಿ ನಾಯ್ಡು ಸ್ವಾಗತಿಸಿದ ವಿಪಕ್ಷಗಳು

ಉಪ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿ ರಾಜ್ಯಸಭಾ ಉಪಸಭಾಪತಿಯಾಗಿ ಮೊದಲನೇ ದಿನ ಕರ್ತವ್ಯಕ್ಕೆ ಹಾಜರಾದ ವೆಂಕಯ್ಯ ನಾಯ್ಡು ಅವರನ್ನು ವಿರೋಧ ಪಕ್ಷಗಳು ಶುಕ್ರವಾರ ಸ್ವಾಗತಿಸಿವೆ...

ನವದೆಹಲಿ: ಉಪ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿ ರಾಜ್ಯಸಭಾ ಉಪಸಭಾಪತಿಯಾಗಿ ಮೊದಲನೇ ದಿನ ಕರ್ತವ್ಯಕ್ಕೆ ಹಾಜರಾದ ವೆಂಕಯ್ಯ ನಾಯ್ಡು ಅವರನ್ನು ವಿರೋಧ ಪಕ್ಷಗಳು ಶುಕ್ರವಾರ ಸ್ವಾಗತಿಸಿವೆ. 
ಕಲಾಪ ಆರಂಭವಾದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವೆಂಕಯ್ಯ ನಾಯ್ಡು ಅವರಿಗೆ ಸ್ವಾಗತ ಕೋರಿದರು. ನಂತರ ಮಾತನಾಡಿದ ವಿರೋಧ ಪಕ್ಷಗಳ ನಾಯಕ ಗುಲಾಂ ನಬಿ ಆಜಾದ್ ಅವರು, ಸಣ್ಣ ಪಕ್ಷಗಳು, ಭಿನ್ನಮತೀಯರ ಕುರಿತಂತೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಪಕ್ಷ ಅಥವಾ ಧರ್ಮಕ್ಕಿಂತಲೂ ನ್ಯಾಯಕ್ಕೆ ಅತ್ಯಂತ ಪ್ರಾಮುಖ್ಯತೆಯನ್ನು ನೀಡಬೇಕೆಂದು ಸಲಹೆ ನೀಡಿದರು. 
ಒಂದು ಪಕ್ಷಕ್ಕೆ ಸೇರಿದ ವ್ಯಕ್ತಿ, ಆ ಪಕ್ಷದ ಸಿದ್ಧಾಂತಗಳನ್ನು ಪಾಲಿಸಲು ಹಾಗೂ ಪಸರಿಸಲು ತನ್ನಿಂದ ಸಾಧ್ಯವಾಗುವ ಎಲ್ಲಾ ಕಾರ್ಯಗಳನ್ನು ಮಾಡುತ್ತಾರೆ. ಇದೇ ವ್ಯಕ್ತಿ ಸಚಿವನಾದಾಗ ಆತನ ಆತನ ಜವಾಬ್ದಾರಿ ಪಕ್ಷ ಹಾಗೂ ದೇಶ ಎರಡ ಮೇಲೂ ಇರುತ್ತದೆ. ಇದೇ ವ್ಯಕ್ತಿ ದೇಶದ ಉನ್ನತ ಹುದ್ದೆಗೆ ಹೋದಾಗ ಅಂದರೆ, ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿಯಾಗಿರುವುದರಿಂದ ನಿಷ್ಪಕ್ಷಪಾತವಾಗಿ ಕೆಲ ಮಾಡಬೇಕಾಗುತ್ತದೆ. ಉನ್ನತ ಹುದ್ದೆಗೇರಿರುವ ನಾಯ್ಡು ಅವರಿಗೆ ಈ ಮೂಲಕ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ನಾಯ್ಡು ಅವರ ಸ್ಥಾನ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕೆಂಬುದನ್ನು ಸೂಚಿಸುತ್ತದೆ. ಪಕ್ಷ ಹಾಗೂ ಧರ್ಮಕ್ಕಿಂತಲೂ ಬುದ್ಧಿವಂತಿಗೆ ಹಾಗೂ ನ್ಯಾಯ ನೀಡುವುದು ಅತ್ಯಂತ ಮುಖ್ಯವಾಗುತ್ತದೆ ಎಂದಿದ್ದಾರೆ. 

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಸಂದರ್ಭದಲ್ಲಿ ನಾವು ಮರೆಯಬಾರದು. ಗಾಂಧೀಜಿ, ಜವಾಹರ್ ಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ಮೌಲಾನಾ ಆಜಾದ್ ಅವರು ದೇಶಕ್ಕಾಗಿ ನೀಡಿರುವ ಕೊಡುಗೆಗಳನ್ನು ಯಾರು ಮರೆಯಲು ಸಾಧ್ಯ? ಅವರ ತ್ಯಾಗ ನಮಗೆ ಸಂವಿಧಾನವನ್ನು ನೀಡಿದೆ. ಇಂದು ಯಾರು ಬೇಕಾದರೂ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಮಂತ್ರಿ, ಸುಪ್ರೀಂಕ್ರೋಟ್ ನ್ಯಾಯಾಧೀಶ, ಸೇನಾಧಿಕಾರಿಯಾಗಬಹುದು. ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೂ ಸೆಲ್ಯೂಟ್ ಹೊಡೆಯುತ್ತಿದ್ದೇನೆಂದು ತಿಳಿಸಿದ್ದಾರೆ. 

ಈ ಸಂದಂರ್ಭ ಪ್ರಜಾಪ್ರಭುತ್ವದ ಉತ್ತಮ ಭಾಗವಾಗಿದೆ. ವ್ಯಕ್ತಿಯ ಶ್ರೀಮಂತಿಕೆ, ಬಡತನ ಹಾಗೂ ಕುಟುಂಬದ ಹಿನ್ನಲೆಯನ್ನು ನೋಡದೆಯೇ ಒಬ್ಬ ವ್ಯಕ್ತಿಯನ್ನು ಉನ್ನತ ಹುದ್ದೆಗೇರುವಂತೆ ಮಾಡಲಾಗಿದೆ. ಕುಟುಂಬದ ಪ್ರಭಾವಗಳಿಲ್ಲದೆಯೇ ಉನ್ನತ ಸ್ಥಾನಕ್ಕೇರಿರುವ ಹಲವಾರು ವ್ಯಕ್ತಿಗಳನ್ನು ನಾವು ಇಂದು ನೋಡಬಹುದು. ಈ ಎಲ್ಲಾ ಬೆಳವಣಿಗೆಗಳ ಹಿಂದೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನವೆಂಬ ದೊಡ್ಡ ಶಕ್ತಿ ಅಡಗಿದೆ ಎಂದಿದ್ದಾರೆ. 

ಇದೇ ವೇಳೆ ನಾಯ್ಡು ಅವರನ್ನು ಹೊಗಳಿರುವ ವಿರೋಧ ಪಕ್ಷಗಳ ನಾಯಕರು, ನಾಯ್ಡು ಅವರು ಬುಡದಿಂದ ಕಾರ್ಯನಿರ್ವಹಿಸಿ ಉತ್ತುಂಗದ ಹಂತಕ್ಕೆ ಏರಿದ್ದಾರೆ. ಕೇವಲ ಪಕ್ಷದಲ್ಲಿ ಅಷ್ಟೇ ಅಲ್ಲ. ಉಪರಾಷ್ಟ್ರಪತಿಯಾಗಿಯೂ ಕೂಡ ಉತ್ತುಂಗಕ್ಕೇರಲಿದ್ದೀರಿ. ಯಾರು ಅತ್ಯಂತ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುತ್ತಾರೋ ಅಂತಹವರು ಇಂತಹ ಮಟ್ಟಕ್ಕೆ ಏರಬಹುದು ಎಂಬ ವಿಚಾರ ಪಕ್ಷ ಹಾಗೂ ವಿರೋಧ ಪಕ್ಷಗಳಲ್ಲಿರುವ ಪ್ರತೀಯೊಬ್ಬರಿಗೂ ಸ್ಪೂರ್ತಿಯನ್ನು ನೀಡಲಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT