ನವದೆಹಲಿ: ನವದೆಹಲಿ-ಆಗ್ರಾ ಇಂಟರ್ ಸಿಟಿ ರೈಲಿನಲ್ಲಿ ಕಳೆದ ರಾತ್ರಿ ಸೀಟಿಗಾಗಿ ಭಾರೀ ಜಗಳ ನಡೆದಿದ್ದು ಈ ವೇಳೆ ಚಲಿಸುತ್ತಿದ್ದ ರೈಲಿನಿಂದ ಇಬ್ಬರನ್ನು ಹೊರ ದೂಡಿದ್ದು ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ರೈಲಿನಲ್ಲಿ ಸೀಟು ಹಂಚಿಕೊಳ್ಳುವ ವಿಚಾರವಾಗಿ ಜಗಳ ಆರಂಭವಾಗಿದೆ. ನಂತರ ಪರಸ್ಪರ ಕೈ ಕೈ ಮಿಲಾಯಿಸಿದ್ದು ನಂತರ ಕಿಡಿಗೇಡಿಗಳು ಇಬ್ಬರನ್ನು ಚಲಿಸುತ್ತಿದ್ದ ರೈಲಿನಿಂದ ಹೊರ ದೂಡಿದ್ದಾರೆ. ಪರಿಣಾಮ ಓರ್ವ ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದು ಇನ್ನೋರ್ವನ ಸ್ಥಿತಿ ಗಂಭೀರವಾಗಿದ್ದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಪ್ರಕರಣ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದು ಆರೋಪಿಗಳು, ಮೃತಪಟ್ಟ ಮತ್ತು ಗಾಯಾಳುವಿನ ಕುರಿತು ವಿವರ ಪತ್ತೆಯಾಗಿಲ್ಲ.