ನವದೆಹಲಿ: ಸಮಾಜವನ್ನು ಒಡೆಯುತ್ತಿರುವ ಭಯೋತ್ಪಾದನೆ, ಪ್ರತ್ಯೇಕತೆ ವಿರುದ್ಧ ಪ್ರತಿಯೊಬ್ಬ ಭಾರತೀಯನು ಒಗ್ಗಟ್ಟಾಗಿ ಹೋರಾಡುವ ಅವಶ್ಯಕತೆಯಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೇಶದ ಜನತೆಗೆ ಶುಭಾಶಯ ಹೇಳಿರುವ ಅವರು, ಪ್ರತ್ಯೇಕತೆ ವಿರುದ್ಧ ಎಲ್ಲಾ ಭಾರತೀಯರು ಒಗ್ಗಟ್ಟಾಗಿ ಹೋರಾಡುವ ಅವಶ್ಯಕತೆಯಿದೆ ಎಂದು ಸೋನಿಯಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಯಾವಾಗಲೂ ಈ ದೇಶ ಪ್ರಗತಿ ಹೊಂದಬೇಕು ಎಂದು ಆಶಿಸುತ್ತೇನೆ, ಪ್ರತಿಯೊಬ್ಬರು ಸ್ವತಂತ್ರ್ಯ ಭಾರತೀಯನಾಗಿರುವುದಕ್ಕೆ ಹೆಮ್ಮೆ ಪಡಬೇಕು , 71ನೇ ಸ್ವಾತಂತ್ರೋತ್ಸವ ಪ್ರತಿಯೊಬ್ಬರಿಗೂ ಸಂತೋಷ, ಸಮೃದ್ದಿ, ಆರೋಗ್ಯ ತರಲಿ ಎಂದು ಬಯಸುವುದಾಗಿ ಹೇಳಿದ್ದಾರೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಪಕ್ಷದ ಹಲವು ಹಿರಿಯ ಮುಖಂಡರು ಹಾಜರಿದ್ದರು.