ನವದೆಹಲಿ: ಐಐಟಿ ಪ್ರವೇಶ ಪರೀಕ್ಷೆಯಲ್ಲಿ ದೋಷಗಳನ್ನು ಬಹಿರಂಗಪಡಿಸಿದ್ದ ಐಐಟಿ ಖರಗಪುರ್ ಪ್ರಾಧ್ಯಾಪಕ ರಾಜೀವ್ ಕುಮಾರ್ ಅವರು ಕಡ್ಡಾಯ ನಿವೃತ್ತಿಯನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರದ್ದುಗೊಳಿಸಿದ್ದಾರೆ.
ರಾಷ್ಟ್ರಪತಿ ಭವನದಿಂದ ನಿರ್ಗಮಿಸುವ ಕೊನೆ ಗಳಿಯಲ್ಲಿ ಸೌಜನ್ಯ ತೊರಿರುವ ಪ್ರಣಬ್ ಮುಖರ್ಜಿ ಅವರು ರಾಜೀವ್ ಕುಮಾರ್ ಅವರು, ಕುಮಾರ್ ಮೇಲೆ ವಿಧಿಸಿದ ದಂಡವನ್ನು ಮುಂದೂಡಲು ಆದೇಶಿಸಿದ್ದಾರೆ.
ಈ ಸಂಬಂಧ ಕಳೆದ ವಾರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಐಐಟಿ ಖರಗಪುರ್ ನಿರ್ದೇಶಕರಿಗೆ ಆದೇಶ ನೀಡಿದ್ದು, ಅದರಲ್ಲಿ ಪ್ರಣಬ್ ಮುಖರ್ಜಿ ಅವರ ನಿರ್ಧಾರವನ್ನು ಉಲ್ಲೇಖಿಸಿದೆ.
ಪ್ರೊಫೆಸರ್ ರಾಜೀವ್ ಕುಮಾರ್ ಅವರು ಸೆಪ್ಟೆಂಬರ್ 3, 2014 ರಲ್ಲಿ ಸಲ್ಲಿಸಿದ ಮನವಿಯನ್ನು ಪರಿಗಣಿಸಿ, ಐಐಟಿ ಖರಗಪುರ್ ಸಂದರ್ಶಕರಾದ ಭಾರತದ ರಾಷ್ಟ್ರಪತಿಯಾಗಿ ನಾನು ಅವರ ಕಡ್ಡಾಯ ನಿವೃತ್ತಿಯ ದಂಡವನ್ನು ರದ್ದುಗೊಳಿಸಬೇಕು ಎಂದು ನಿರ್ದೇಶಿಸುತ್ತಿರುವುದಾಗಿ ಪ್ರಣಬ್ ಮುಖರ್ಜಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಕುಮಾರ್ ಅವರು ನಿರಾಕರಿಸಿದ್ದಾರೆ.
ಐಐಟಿ ಪ್ರವೇಶ ಪರೀಕ್ಷೆಯಲ್ಲಿನ ದೋಷಗಳನ್ನು ಮತ್ತು ಅಕ್ರಮಗಳನ್ನು ಬಹಿರಂಗಪಡಿಸುವ ಮೂಲಕ ಸಂಸ್ಥೆಯ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ರಾಜೀವ್ ಕುಮಾರ್ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗಿತ್ತು.