ಬಿಹಾರ ರಾಜ್ಯ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ 
ದೇಶ

ಬಿಹಾರ: ಸುಶೀಲ್ ಕುಮಾರ್ ಮೋದಿ ಕಾರಿನ ಮೇಲೆ ದಾಳಿ, ನಮ್ಮ ಕೈವಾಡವಿಲ್ಲ ಎಂದ ಲಾಲೂ

ಬಿಹಾರ ರಾಜ್ಯ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರ ಕಾರಿನ ಮೇಲೆ ಅನಾಮಧೇಯ ವ್ಯಕ್ತಿಗಳು ದಾಳಿ ಮಾಡಿದ್ದು, ಕೂದಲೆಲೆ ಅಂತರದಲ್ಲಿ ಪಾರಾಗಿದ್ದಾರೆಂದು...

ಪಾಟ್ನ: ಬಿಹಾರ ರಾಜ್ಯ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರ ಕಾರಿನ ಮೇಲೆ ಅನಾಮಧೇಯ ವ್ಯಕ್ತಿಗಳು ದಾಳಿ ಮಾಡಿದ್ದು, ಕೂದಲೆಲೆ ಅಂತರದಲ್ಲಿ ಪಾರಾಗಿದ್ದಾರೆಂದು ಬುಧವಾರ ತಿಳಿದುಬಂದಿದೆ.
 ಬೀಹಾರ ರಾಜ್ಯದ ವೈಶಾಲಿ ಜಿಲ್ಲೆಯ ಕಾಲಾ ಪಹರ್ ಗ್ರಾಮದಲ್ಲಿ ಸುಶೀಲ್ ಕುಮಾರ್ ಮೋದಿಯವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅನಾಮಧೇಯ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ
ಸುಶೀಲ್ ಮೋದಿಯವರ ಕಾರು ಹೋಗುವುದಕ್ಕೂ ಮುನ್ನ ಇದೇ ರಸ್ತೆಯಲ್ಲಿ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಪ್ರಸಾದ್ ಯಾದವ್ ಅವರ ಕಾರು ತೆರಳಿತ್ತು. ಇದಾದ ಕೆಲವೇ ನಿಮಿಷಗಳಲ್ಲಿ ಸುಶೀಲ್ ಮೋದಿಯವರ ಕಾರು ತೆರಳುತ್ತಿತ್ತು. ಹೀಗಾಗಿ ದಾಳಿ ಹಿಂದೆ ಆರ್'ಜೆಡಿ ಕೈವಾಡವಿದೆ ಎಂದು ಆರೋಪಿಸಲಾಗಿತ್ತು. 
ಇದೀಗ ಆರೋಪಗಳನ್ನು ತಿರಸ್ಕರಿಸಿರುವ ಆರ್'ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು, ಸುಶೀಲ್ ಕುಮಾರ್ ಮೋದಿಯವರ ಕಾರಿನ ಮೇಲೆ ದಾಳಿ ಪ್ರಕರಣದಲ್ಲಿ ಪಕ್ಷದ ಯಾವುದೇ ಕಾರ್ಯಕರ್ತರ ಕೈವಾಡವಿಲ್ಲ ಎಂದು ಹೇಳಿದ್ದಾರೆ. 
ಆರ್'ಜೆಡಿ ಕಾರ್ಯಕರ್ತರು ಹಿಂಸಾಚಾರವನ್ನು ನಂಬುವುದಿಲ್ಲ. ರಾಜಕೀಯ ಲಾಭ ಪಡೆಯುವ ಸಲುವಾಗಿ ಸುಶೀಲ್ ಕುಮಾರ್ ಮೋದಿಯವರು ತಮ್ಮ ಬೆಂಬಲಿಗರ ಸಹಾಯದಿಂದ ಕಥೆ ಕಟ್ಟುತ್ತಿದ್ದಾರೆ. ಈ ರೀತಿಯ ನಾಟಕಗಳನ್ನು ಮಾಡುವುದರಲ್ಲಿ ಬಿಜೆಪಿ ಎತ್ತಿದ ಕೈ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಜಿಲ್ಲಾಧಿಕಾರಿಗಳ ವಿರುದ್ಧ ಕಿಡಿಕಾರಿರುವ ಅವರು, ತೇಜಸ್ವಿ ಯಾದವ್ ಅವರು ಹೋಗಿದ್ದ ರಸ್ತೆಯಲ್ಲಿಯೇ ಸುಶೀಲ್ ಕುಮಾರ್ ಮೋದಿಯವರನ್ನೇಕೆ ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು? ಪರ್ಯಾಯ ರಸ್ತೆಗಳನ್ನು ಬಳಕೆ ಮಾಡಿಕೊಂಡು ಕರೆದುಕೊಂಡು ಹೋಗಬಹುದಿತ್ತು. ಹಗರಣಗಳಲ್ಲಿ ಸುಶೀಲ್ ಕುಮಾರ್ ಮೋದಿಯವರ ಹೆಸರು ಕೇಳಿಬಂದಿದ್ದು, ಇದೀಗ ಜನರ ಗಮನವನ್ನು ಬೇರೆಡೆ ಸೆಳೆಯುವ ಸಲವಾಗಿ ಈ ರೀತಿಯ ಯತ್ನಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಮಾಜಿ ಶಾಸಕ ಅಚುತಾನಂದ್ ಸಿಂಗ್ ಅವರ ತಾಯಿಯವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಸಲವಾಗಿ ಸುಶೀಲ್ ಕುಮಾರ್ ಮೋದಿಯವರು ತೆರಳುತ್ತಿದ್ದರು ಈವೇಳೆ ಅನಾಮಧೇಯ ವ್ಯಕ್ತಿಗಳು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆಂದು ತಿಳಿದುಬಂದಿದೆ. 
ಘಟನೆಯಲ್ಲಿ ಸುಶೀಲ್ ಕುಮಾರ್ ಮೋದಿಯವರ ಕಾರಿನ ಗಾಜು ಪುಡಿಪುಡಿಯಾಗಿದ್ದು, ಕೂದಲೆಳೆ ಅಂತರದಲ್ಲಿ ಉಪ ಮುಖ್ಯಮಂತ್ರಿಗಳು ಪಾರಾಗಿದ್ದಾರೆ, ದಾಳಿ ಬಳಿಕ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT