ಪಾಲಕ್ಕಾಡ್: ಸ್ವಾತಂತ್ರ್ಯ ದಿನಾಚರಣೆಯಂದು ಆರ್ ಎಸ್ಎಸ್ ಮುಖಂಡ ಮೋಹನ್ ಭಾಗ್ವತ್ ಅವರಿಗೆ ಪಾಲಕ್ಕಾಡ್ ನಲ್ಲಿ ಧ್ವಜಾರೋಹಣ ನೆರವೇರಿಸಲು ಅವಕಾಶ ನಿರಾಕರಿಸಿ ನಿರ್ಬಂಧ ವಿಧಿಸಿದ್ದ ಪಾಲಕ್ಕಾಡ್ ಜಿಲ್ಲಾಧಿಕಾರಿಯನ್ನು ವರ್ಗಾವಣೆಗೊಳಿಸಲಾಗಿದೆ.
ಮೋಹನ್ ಭಾಗ್ವತ್ ಅವರಿಗೆ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಲು ಅವಕಾಶ ನಿರಾಕರಿಸಿದ್ದ ಅಧಿಕಾರಿಯನ್ನು ವರ್ಗಾವಣೆಗೊಳಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಸರ್ಕಾರ ಇದೊಂದು ಸಾಮಾನ್ಯವಾದ ವರ್ಗಾವಣೆಯಷ್ಟೇ ಎಂದು ಹೇಳಿದೆ.
ಮೋಹನ್ ಭಾಗ್ವತ್ ಅವರಿಗೆ ನಿರ್ಬಂಧ ವಿಧಿಸಿದ್ದ ಅಧಿಕಾರಿಯೊಂದಿಗೆ ಇನ್ನೂ ನಾಲ್ವರು ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದೆ.