ದೇಶ

ಥಾಣೆ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೋಲೀಸ್ ದಾಳಿ: ನಾಲ್ವರು ಮಹಿಳೆಯರ ರಕ್ಷಣೆ

Raghavendra Adiga
ಥಾಣೆ: ಥಾಣೆ ಪೊಲೀಸರು ಜಿಲ್ಲೆಯ ಲಾಡ್ಜ್ ಒಂದರಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪತ್ತೆಹಚ್ಚಿದ್ದಾರೆ. ವೇಷ್ಯಾವಾಟಿಕೆಯಲ್ಲಿ ತೊಡಗಿದ್ದ ಆರು ಪುರುಷರನ್ನು ಬಂಧಿಸಿದ್ದಲ್ಲದೆ ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ. 
ಥಾಣೆಯ ಮಾನವ ಅಕ್ರಮ ಕಳ್ಳ ಸಾಗಣೆ ವಿರೋಧಿ ವಿಭಾಗದ ಪೋಲೀಸರು ಖಚಿತ ಮಾಹಿತಿಯೊಂದಿಗೆ ಕಲ್ಯಾಣ್ ಟೌನ್ ಶಿಪ್ ವ್ಯಾಪ್ತಿಯ ಲಾಡ್ಜ್ ನಮೇಲೆ ಮಂಗಳವಾರ ಸಂಜೆ ದಾಳಿ ನಡೆಸಿದ್ದರು. 
ಲಾಡ್ಜ್ ನ ಇಬ್ಬರು ವ್ಯವಸ್ಥಾಪಕರು, ಕ್ಯಾಶಿಯರ್, ವೇಶ್ಯಾವಾಟಿಕೆ ದಂಧೆಯ ಏಜೆಂಟರು, ಗುತ್ತಿಗೆದಾರರಾಗಿದ್ದ ಆರು ಮಂದಿಯನ್ನು ಬಂಧಿಸಿದ್ದೇವೆ ಎಂದು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ರವೀಂದ್ರ ದಾಂಡ್ಕರ್ ತಿಳಿಸಿದ್ದಾರೆ.
ಓರ್ವ ಬಾಂಗ್ಲಾದೇಶ ಮೂಲದ ಮಹಿಳೆ ಸೇರಿ ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ ಅವರು. ಸೆಕ್ಷನ್ 370 (2) (3) (3) (34) ಮತ್ತು 34 ಮತ್ತು ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯಿದೆಗೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. 
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದ ಪೋಲೀಸರು ಹೆಚ್ಚಿನ ವಿಚಾರಣೆಗಾಗಿ ಆಗಸ್ಟ್ 19 ರವರೆಗೆ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
SCROLL FOR NEXT