ಸಂಗ್ರಹ ಚಿತ್ರ 
ದೇಶ

ಭಾರತೀಯ ಸೇನೆಯ ಬತ್ತಳಿಕೆ ಸೇರಲಿವೆ ಅಮೆರಿಕದ ವಿಧ್ವಂಸಕ 6 ಆಪಾಚೆ ಹೆಲಿಕಾಪ್ಟರ್!

ಅಮೆರಿಕ ಸೇನೆಯ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿರುವ ವಿಧ್ವಂಸಕ ದಾಳಿ ಸಾಮರ್ಥ್ಯದ ಆಪಾಚೆ ಹೆಲಿಕಾಪ್ಟರ್ ಗಳು ಶೀಘ್ರ ಭಾರತದ ಬತ್ತಳಿಕೆ ಸೇರಿಲಿದ್ದು, 6 ಆಪಾಚೆ ಹೆಲಿಕಾಪ್ಟರ್ ಗಳ ಖರೀದಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ಗುರುವಾರ ನೀಡಿದೆ.

ನವದೆಹಲಿ: ಅಮೆರಿಕ ಸೇನೆಯ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿರುವ ವಿಧ್ವಂಸಕ ದಾಳಿ ಸಾಮರ್ಥ್ಯದ ಆಪಾಚೆ ಹೆಲಿಕಾಪ್ಟರ್ ಗಳು ಶೀಘ್ರ ಭಾರತದ ಬತ್ತಳಿಕೆ ಸೇರಿಲಿದ್ದು, 6 ಆಪಾಚೆ ಹೆಲಿಕಾಪ್ಟರ್ ಗಳ ಖರೀದಿ ಒಪ್ಪಂದಕ್ಕೆ ಕೇಂದ್ರ  ಸರ್ಕಾರ ಅನುಮೋದನೆ ಗುರುವಾರ ನೀಡಿದೆ.

ಅಮೆರಿಕದ ಖ್ಯಾತ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಸಂಸ್ಥೆ ಈ ಅಪಾಚೆ ಹೆಲಿಕಾಪ್ಟರ್ ಗಳನ್ನು ತಯಾರಿಸುತ್ತಿದ್ದು, ಈ ಹಿಂದಿನ ಒಪ್ಪಂದದಂತೆ ಭಾರತಕ್ಕೆ 6 ಅಪಾಚೆ ಎಎಚ್64 ಇ ದಾಳಿ ಹೆಲಿಕಾಪ್ಟರ್ ಗಳನ್ನು ಮಾರಾಟ  ಮಾಡಲು ಮುಂದಾಗಿದೆ. ನಿನ್ನೆಯಷ್ಟೇ ಕೇಂದ್ರ ಸರ್ಕಾರ ಕೂಡ ಬೋಯಿಂಗ್ ಸಂಸ್ಥೆಯೊಂದಿಗಿನ ಒಪ್ಪಂದಕ್ಕೆ ಅನುಮೋದನೆ ನೀಡಿದ್ದು, 6 ಅಪಾಚೆ ಎಎಚ್64 ಇ ಹೆಲಿಕಾಪ್ಟರ್ ಗಳನ್ನು ಖರೀದಿಸುವ ರಕ್ಷಣಾ ಇಲಾಖೆಯ ಪ್ರಸ್ತಾವಕ್ಕೆ  ಅನುಮೋದನೆ ನೀಡಿದೆ.

ಅಪಾಚೆ ಎಎಚ್64 ಇ ದಾಳಿ ಹೆಲಿಕಾಪ್ಟರ್ ನಿರ್ಮಾಣ ಮಾಡುತ್ತಿರುವ ಬೋಯಿಂಗ್ ಸಂಸ್ಥೆಯೊಂದಿಗೆ ಕೇಂದ್ರ ಸರ್ಕಾರ ಸುಮಾರು 4,168 ಕೋಟಿ ರು.ಗಳ ಒಪ್ಪಂದ ಮಾಡಿಕೊಂಡಿದ್ದು, ಇಂತಹ ಆರು ಹೆಲಿಕಾಪ್ಟರ್ ಗಳನ್ನು ಖರೀದಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿಂದೆ ರಕ್ಷಣಾ ಇಲಾಖೆ ಸರ್ಕಾರಕ್ಕೆ ನೀಡಿದ್ದ  ಬೇಡಿಕೆಯ ಪಟ್ಟಿಯಲ್ಲಿ ಆಪಾಚೆ ಹೆಲಿಕಾಪ್ಟರ್ ಗಳ ಖರೀದಿ ಪ್ರಸ್ತಾಪ ಕೂಡ ಇತ್ತು ಎಂದು ಹೇಳಲಾಗಿದೆ. ಹಲವು ವರ್ಷಗಳ ಹಿಂದೆಯೇ ಸೇನೆ ಈ ಬಗ್ಗೆ ಕೇಂದ್ರಸರ್ಕಾರದ ಗಮನಕ್ಕೆ ತಂದಿತ್ತು. ಆದರೆ ದೇಶೀಯ ಯುದ್ಧ ಹೆಲಿಕಾಪ್ಟರ್  ಗಳ ಬಳಕೆಗೆ ಮುಂದಾಗಿದ್ದ ವಾಯುಸೇನೆ ಈ ಖರೀದಿಗೆ ವಿರೋಧ ವ್ಯಕ್ಚಪಡಿಸಿತ್ತು. ಇದೀಗ ಚೀನಾ-ಭಾರತ ನಡುವಿನ ಡೊಕ್ಲಾಮ್ ವಿವಾದ ತಾರಕಕ್ಕೇರಿರುವಂತೆಯೇ ಅಪಾಚೆ ಹೆಲಿಕಾಪ್ಟರ್ ಗಳ ಖರೀದಿಗೆ ಕೇಂದ್ರ ಮುಂದಾಗಿದೆ.

ರಕ್ಷಣಾ ಸಚಿವ ಅರುಣ್ ಜೇಟ್ಲಿ ನೇತೃತ್ವದ ರಕ್ಷಣಾ ಖರೀದಿ ಮಂಡಳಿ 6 ಹೆಲಿಕಾಪ್ಟರ್ ಖರೀದಿ ಶಿಫಾರಸಿಗೆ ಹಸಿರು ನಿಶಾನೆ ತೋರಿಸಿದೆ ಎಂದು ಮೂಲಗಳು ತಿಳಿಸಿವೆ. ಸೇನೆಗೆ ಹಲವು ದಾಳಿ ಹೆಲಿಕಾಪ್ಟರ್‌ಗಳ ಅಗತ್ಯತೆ ಇತ್ತು.  ಆದುದರಿಂದ ಎರಡು ವರ್ಷಗಳ ಹಿಂದೆ 39 ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಬಯಸಿತ್ತು. ಬೋಯಿಂಗ್ ಅಂತಾರಾಷ್ಟ್ರೀಯ ಗ್ರಾಹಕರಿಗೆ ಈ ವರೆಗೂ 2,200ಕ್ಕೂ ಅಧಿಕ ಅಪಾಚೆ ಹೆಲಿಕಾಪ್ಟರ್ ಗಳನ್ನು ಪೂರೈಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!

ಕೇವಲ 4 ಚಿತ್ರ ಮಾಡಿದ ನಟನಿಗೆ 'ಸರ್' ಅಂತೀರಲ್ಲ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರ ಬೇಸರ, Video!

ಶ್ರೀಲಂಕಾ ವಿರುದ್ಧ 165 ರನ್ ಗಳಿಂದ ಗೆಲುವು: WTC ಪಾಯಿಂಟ್ ಪಟ್ಟಿಯಲ್ಲಿ ಭಾರತದ ಸ್ಥಾನ ಬದಲಾವಣೆ ಆಯ್ತಾ?

ಸಿಎಂ ವಿಜಯ್ ಯು- ಟರ್ನ್: ಮತ್ತೊಂದು ಮಹತ್ವದ ಆದೇಶ ಹಿಂಪಡೆದ ತಮಿಳುನಾಡು ಸರ್ಕಾರ!

ದಾವಣಗೆರೆ-ಹರಿಹರ ಅವಳಿ ನಗರ ಅಭಿವೃದ್ಧಿಗೆ 'ಮಾಸ್ಟರ್ ಪ್ಲಾನ್ 2041' ಕ್ಕೆ ಸರ್ಕಾರದ ಅನುಮೋದನೆ!