ದೇಶ

ವಿಲೀನಗೊಳ್ಳಲಿರುವ ಎಐಎಡಿಎಂಕೆಗೆ ಪನ್ನೀರ್ ಸೆಲ್ವಂ ಸಾರಥ್ಯ, ಮೇಲ್ಮನೆ ಪುನಾರಚನೆ ಸಾಧ್ಯತೆ

Srinivas Rao BV
ಚೆನ್ನೈ: ಎಐಎಡಿಎಂಕೆ ವಿಲೀನದ ನಂತರ ಪನ್ನೀರ್ ಸೆಲ್ವಂ ಹಾಗೂ ಪಳನಿಸ್ವಾಮಿ ಬಣಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಯೋಜನೆ ರೂಪಿಸಲಾಗಿದ್ದು, ಎಐಎಡಿಎಂಕೆ ನೇತೃತ್ವದ ಸರ್ಕಾರಕ್ಕೆ ಪಳನಿಸ್ವಾಮಿ ಸಾರಥ್ಯ ವಹಿಸಿಕೊಂಡರೆ ಎಐಎಡಿಎಂಕೆ ಪಕ್ಷದ ಸಾರಥ್ಯವನ್ನು ಪನ್ನೀರ್ ಸೆಲ್ವಂ ಗೆ ವಹಿಸಲು ನಿರ್ಧರಿಸಲಾಗಿದೆ. 
ಎಲ್ಲವೂ ಅಂದುಕೊಂಡಂತೆ ನಡೆದರೆ ಎಐಎಡಿಎಂಕೆ ಪಕ್ಷಕ್ಕೆ ಪನ್ನೀರ್ ಸೆಲ್ವಂ ಮುಖ್ಯಸ್ಥರಾಗಲಿದ್ದು, ವಿಧಾನ ಪರಿಷತ್ ಸ್ಥಾನಗಳನ್ನು ಪುನಾರಚನೆ ಮಾಡಲಾಗುತ್ತದೆ. ಪನ್ನೀರ್ ಸೆಲ್ವಂ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಮಾಡಿ ಉಪಮುಖ್ಯಮಂತ್ರಿ ಪಟ್ಟವನ್ನೂ ನೀಡಲಾಗುತ್ತದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ. 
ಪನ್ನೀರ್ ಸೆಲ್ವಂ ಬಣದಲ್ಲಿರುವ ಶಾಸಕರಿಗೂ ಸಚಿವ ಸ್ಥಾನ ನೀಡಲಾಗುತ್ತದೆ, ಈ ಎಲ್ಲಾ ಅಂಶಗಳನ್ನು ಉಭಯ ಬಣಗಳ ನಾಯಕರು ಒಪ್ಪಿದ್ದು, ಎಐಎಡಿಎಂಕೆಯ ಪನ್ನೀರ್ ಸೆಲ್ವಂ ಬಣ ಶೀಘ್ರವೇ ವಿಲೀನಗೊಳ್ಳಲಿದೆ ಎಂದು ತಿಳಿದುಬಂದಿದೆ. 
SCROLL FOR NEXT