ಚುನಾವಣೆಯಲ್ಲಿ ಪಿಒಗಳು ಪ್ರಚಾರ ಮಾಡಬಹುದೆ? 
ದೇಶ

ಚುನಾವಣೆಯಲ್ಲಿ ಪಿಐಒಗಳು ಪ್ರಚಾರ ಮಾಡಿದರೆ ವೀಸಾ ನಿಯಮಗಳನ್ನು ಉಲ್ಲಂಘಿಸಿದಂತಾಗುವುದೇ?: ಚು.ಆಯೋಗ

ಭಾರತೀಯ ಮೂಲದ ಜನರು (ಪಿಐಒಗಳು) ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಅಭಿಯಾನ ನಡೆಸಿದರೆ, ಅವರು ತಮ್ಮ ವೀಸಾ ನೀತಿಯನ್ನು ಉಲ್ಲಂಘಿಸಿದಂತಾಗುತ್ತದೆಯೆ?

ಹೊಸದಿಲ್ಲಿ:  ಭಾರತೀಯ ಮೂಲದ ಜನರು (ಪಿಐಒಗಳು) ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಅಭಿಯಾನ ನಡೆಸಿದರೆ, ಅವರು ತಮ್ಮ ವೀಸಾ ನೀತಿಯನ್ನು ಉಲ್ಲಂಘಿಸಿದಂತಾಗುತ್ತದೆಯೆ?
ಭಾರತೀಯ ಚುನಾವಣೆಗಳಲ್ಲಿ ಪ್ರಚಾರ ಮಾಡುವವರ ಬಗ್ಗೆ ಚುನಾವಣಾ ಕಾನೂನಿನಲ್ಲಿ ಸ್ಪಷ್ಠತೆ ಇರದ ಕಾರಣದಿಂದ  ಕೇಂದ್ರ ಚುನಾವಣಾ ಆಯೋಗವು ಕಾನೂನು ಸಚಿವಾಲಯಕ್ಕೆ ಈ ಪ್ರಶ್ನೆಯನ್ನು ಒಡ್ಡಿದೆ.
ಇತ್ತೀಚೆಗೆ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ, ಹಲವಾರು ಪಿಐಓಗಳು ಎಎಪಿಯ ಪ್ರಚಾರಕ್ಕಾಗಿ ರಾಜ್ಯಕ್ಕೆ ಬಂದಾಗ, ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ಪಿಐಓಗಳು  ಹಾಗೆ ಮಾಡಬಹುದೆ ಎಂಬ ಬಗ್ಗೆ ಆಯೋಗದೊಡನೆ ಪ್ರಶ್ನೆಯೊಂದನ್ನು ಎತ್ತಿದ್ದರು.
ಚುನಾವಣೆ ಕಾನೂನು ಭಾರತೀಯ ಚುನಾವಣೆಯಲ್ಲಿ ಯಾರು ಪ್ರಚಾರ ಮಾಡಬಹುದು ಎಂಬುದರ ಬಗ್ಗೆ ಮೌನವಾಗಿದೆ.
"ಈ ವಿಷಯದಲ್ಲಿ ಯಾವುದೇ ಪಕ್ಷದಿಂದ ಯಾವುದೇ ದೂರು ಸಹ ದಾಖಲಾಗಿಲ್ಲ.ಆದರೆ ಇಂದಿನ  ಹೊಸ ಪರಿಸ್ಥಿತಿಯಾಗಿ ಈ ಪ್ರಶ್ನೆ ಮುನ್ನಲೆಗೆ ಬಂದಿದೆ. ಚುನಾವಣಾ ನಿಯಮಗಳ ಪ್ರತಿನಿಧಿಯು ಈ ವಿಷಯದ ಬಗ್ಗೆ ಮೌನವಾಗಿರುವುದರಿಂದ, ಆಯೋಗವು ವಿದೇಶಾಂಗ ಸಚಿವಾಲಯದಿಂದ ಸ್ಪಷ್ಠನೆಯನ್ನು ಕೇಳಿದೆ.
"ಕಾನೂನು ಸಚಿವಾಲಯದ ಪ್ರತಿಕ್ರಿಯೆ ಪಡೆಯಲು ಎಂ ಎಫ್ ಎ ಇದನ್ನು ಕೇಳಿದೆ" ಎಂದು ಚುನಾವಣಾ ಆಯೋಗ ಮತ್ತು ಸರ್ಕಾರದ ನಡುವಿನ ಪತ್ರವ್ಯವಹಾರದ ಬಗ್ಗೆ ಸರ್ಕಾರದ ಕಾರ್ಯಕರ್ತರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ