ದೇಶ

"ಸಿಕ್ಕಾ ಫೆಬ್ರವರಿಯಲ್ಲೇ ತೊರೆಯುವವರಿದ್ದರು, ಕಳಪೆ ಪ್ರದರ್ಶನ ಮುಚ್ಚಿಹಾಕಲು ನಾರಾಯಣ ಮೂರ್ತಿ ದೂಷಣೆ"

Srinivas Rao BV
ಬೆಂಗಳೂರು: ವಿಶಾಲ್ ಸಿಕ್ಕಾ ರಾಜೀನಾಮೆ ಪ್ರಹಸನದ ಬಗ್ಗೆ ಇನ್ಫೋಸಿಸ್ ಸಂಸ್ಥೆಯ ಮಾಜಿ ಸಿಎಫ್ಒ ಮೋಹನ್ ದಾಸ್ ಪೈ ಪ್ರತಿಕ್ರಿಯೆ ನೀಡಿದ್ದು, ವಿಶಾಲ್ ಸಿಕ್ಕಾ ಫೆಬ್ರವರಿಯಲ್ಲೇ ಸಂಸ್ಥೆಗೆ ರಾಜೀನಾಮೆ ನೀಡುವವರಿದ್ದರು, ಆದರೆ ಈಗ ಅವರ ಕಳಪೆ ಪ್ರದರ್ಶನವನ್ನು ಮುಚ್ಚಿಹಾಕಲು ಸಹಸಂಸ್ಥಾಪಕ ನಾರಾಯಣ ಮೂರ್ತಿ ಅವರನ್ನು ದೂಷಿಸಲಾಗುತ್ತಿದೆ ಎಂದಿದ್ದಾರೆ.
ವಿಶಾಲ್ ಸಿಕ್ಕಾ ಫೆಬ್ರವರಿಯಲ್ಲೇ ಸಂಸ್ಥೆ ತೊರೆಯಲು ಬಯಸಿದ್ದರು. ಗುರಿಯನ್ನು ಮುಟ್ಟಲಾಗದ್ದಕ್ಕೆ ನಾರಾಯಣ ಮೂರ್ತಿ ಅವರನ್ನು ದೂಷಿಸುವ ಮೂಲಕ ತಮ್ಮ ವೈಫಲ್ಯವನ್ನು ಮುಚ್ಚಿಹಾಕಿಕೊಳ್ಳುತ್ತಿದ್ದಾರೆ ಎಂದು ಮೋಹನ್ ದಾಸ್ ಪೈ ಪಿಟಿಐ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 
ಸಿಕ್ಕಾ ರಾಜೀನಾಮೆ ಇನ್ಫೋಸಿಸ್ ಸಂಸ್ಥೆಯನ್ನು ಬಿಕ್ಕಟ್ಟಿನಲ್ಲಿ ಮುಳುಗಿಸಿದ್ದು, ಹೊಸ ಸಿಇಒ ನೇಮಕ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿವೆ. ನಾರಾಯಣ ಮೂರ್ತಿ ಅವರೊಂದಿಗೆ ತಿಂಗಳುಗಟ್ಟಲೆ ಇದ್ದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸಿಕ್ಕಾ ರಾಜೀನಾಮೆ ನೀಡಿದ್ದಾರೆ. ವಿಶಾಲ್ ಸಿಕ್ಕಾ ಫೆಬ್ರವರಿಯಲ್ಲೇ ಸಂಸ್ಥೆಗೆ ರಾಜೀನಾಮೆ ನೀಡುವವರಿದ್ದರು, ನಾರಾಯಣ ಮೂರ್ತಿ ಅವರ ಹೆಸರು ಪ್ರಸ್ತಾಪಿಸದಿದ್ದರೂ ಕಳಪೆ ಪ್ರದರ್ಶನವನ್ನು ಮುಚ್ಚಿಹಾಕಲು ಸಹಸಂಸ್ಥಾಪಕ ನಾರಾಯಣ ಮೂರ್ತಿ ಅವರನ್ನು ದೂಷಿಸಲಾಗುತ್ತಿದೆ ಎಂದು ಪೈ ಅಭಿಪ್ರಾಯಪಟ್ಟಿದ್ದಾರೆ. 
SCROLL FOR NEXT