ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಭಾರತಕ್ಕೆ ಸಿಗಲಿದೆ ಶ್ರೀಲಂಕಾದ ಹ್ಯಾಂಬಂಟೊಟ ವಿಮಾನ ನಿಲ್ದಾಣದ ನಿರ್ವಹಣೆ?

ಶ್ರೀಲಂಕಾದ ಹ್ಯಾಂಬಂಟೊಟ ವಿಮಾನ ನಿಲ್ದಾಣವನ್ನು ನಡೆಸುವ ಜವಾಬ್ದಾರಿಯನ್ನು ಭಾರತಕ್ಕೆ ವಹಿಸುವ ಸಾಧ್ಯತೆ ಇದೆ...

ಹ್ಯಾಂಬಂಟೊಟ ಏರ್ಪೋರ್ಟ್
Vishwanath S
Updated On : 22 Aug 2017, 5:36 am
ನವದೆಹಲಿ: ಶ್ರೀಲಂಕಾದ ಹ್ಯಾಂಬಂಟೊಟ ವಿಮಾನ ನಿಲ್ದಾಣವನ್ನು ನಡೆಸುವ ಜವಾಬ್ದಾರಿಯನ್ನು ಭಾರತಕ್ಕೆ ವಹಿಸುವ ಸಾಧ್ಯತೆ ಇದೆ.
ಶ್ರೀಲಂಕಾದ ಸಿವಿಲ್ ಆವಿಯೇಶನ್ ಸಚಿವಾಲಯ ಹ್ಯಾಂಬಂಟೊಟದಲ್ಲಿನ ಮಟ್ಟಲ ರಾಜಪಕ್ಷ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭಾರತೀಯ ಸಂಸ್ಥೆಗೆ ಹಸ್ತಾಂತರಿಸುವ ಪ್ರಸ್ತಾವನೆಯನ್ನು ಸಂಪುಟಕ್ಕೆ ಸಲ್ಲಿಸಿದೆ. 
ಈ ವಿಮಾನ ನಿಲ್ದಾಣದ ಜವಾಬ್ದಾರಿ ಭಾರತಕ್ಕೆ ಸಿಕ್ಕರೆ ಇದು ಚೀನಾ ಮತ್ತು ಭಾರತದ ನಡುವೆ ಸಮತೋಲವನ್ನು ಕಾಪಾಡುವ ಶ್ರೀಲಂಕಾದ ಧೋರಣೆಗೆ ಸಹಾಯಕವಾಗಲಿದೆ. 

Advertisement

Advertisement

ಶ್ರೀಲಂಕಾ ಹ್ಯಾಂಬಂಟೊಟ ಬಂದರಿನಲ್ಲಿ ವಿಮಾನ ನಿಲ್ದಾಣವನ್ನು ಚೀನಾದ ಸಹಾಯದೊಂದಿಗೆ ನಿರ್ಮಿಸಿತ್ತು. ಚೀನಾ ಅದಾಗಲೇ ಶ್ರೀಲಂಕಾದಲ್ಲಿ ಸೀಪೋರ್ಟ್ ಅನ್ನು ಹೊಂದಿದ್ದು ಹ್ಯಾಂಬಂಟೊಟ ವಿಮಾನ ನಿಲ್ದಾಣದ ನಿರ್ವಹಣೆಗೂ ಬಿಡ್ ಮಾಡಿದೆ. 
ಸದ್ಯ ಶ್ರೀಲಂಕಾ ಭಾರತದ ಪ್ರಸ್ತಾವನೆಯನ್ನು ವಿಶೇಷವಾಗಿ ಪರಿಗಣಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement