ಸಾಲ ಮರುಪಾವತಿ ಮಾಡಬೇಕಿದ್ದ ದಂಪತಿಗಳು ಆತ್ಮಹತ್ಯೆ: ಬಿಬಿಎಂಪಿ ಕಾರ್ಪೊರೇಟರ್ ವಿರುದ್ಧ ದೂರು 
ದೇಶ

ಸಾಲ ಮರುಪಾವತಿ ಮಾಡಬೇಕಿದ್ದ ದಂಪತಿಗಳು ಆತ್ಮಹತ್ಯೆ: ಬಿಬಿಎಂಪಿ ಕಾರ್ಪೊರೇಟರ್ ವಿರುದ್ಧ ದೂರು

ಸಾಲ ಮರುಪಾವತಿ ಮಾಡಬೇಕಿದ್ದ ಲಾಲ್ ಬಾಗ್ ನ ದೊಡ್ಡಮಾವಳ್ಳಿಯ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಬಿಬಿಎಂಪಿ ಕಾರ್ಪೊರೇಟರ್ ವಿರುದ್ಧವೂ ಆರೋಪ ಕೇಳಿಬಂದಿದ್ದು, ಈಗಾಗಲೇ

ಬೆಂಗಳೂರು: ಸಾಲ ಮರುಪಾವತಿ ಮಾಡಬೇಕಿದ್ದ ಲಾಲ್ ಬಾಗ್ ನ ದೊಡ್ಡಮಾವಳ್ಳಿಯ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಬಿಬಿಎಂಪಿ ಕಾರ್ಪೊರೇಟರ್ ವಿರುದ್ಧವೂ ಆರೋಪ ಕೇಳಿಬಂದಿದ್ದು, ಈಗಾಗಲೇ ಆರೋಪಿಗಳಾಗಿರುವ 5 ಮಂದಿಯೊಂದಿಗೆ ಕಾರ್ಪೊರೇಟರ್ ಸಹ ದಂಪತಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. 
ಕಲಾಸಿ ಪಾಳ್ಯದಲ್ಲಿ ಹೋಟೆಲ್ ನಡೆಸುತ್ತಿದ್ದ ನಂಜುಂಡ ಸ್ವಾಮಿ (47) ಹಾಗೂ ಪುಷ್ಪಲತ (41) ಗೆ ಕಾರ್ಪೊರೇಟರ್ ಅತಿ ಹೆಚ್ಚು ಬಡ್ಡಿ ನೀಡುವಂತೆ ಒತ್ತಡ ಹೇರುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ನಂಜುಂಡ ಸ್ವಾಮಿ ಹಾಗೂ ಪುಷ್ಪಲತಾ ಮೊದಲ ಮಹಡಿಯಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ಗಮನಿಸಿದ ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
ಆತ್ಮಹತ್ಯೆಗೂ ಮುನ್ನ ಬರೆದಿರುವ ಪತ್ರದಲ್ಲಿ ನಂಜುಂಡ ಸ್ವಾಮಿ ಹೆಮ್ಮಿಗೆಪುರದ ಕಾಂಗ್ರೆಸ್ ಕಾರ್ಪೊರೇಟರ್ ಆರ್ಯ ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ ಎಂದು ಪೊಲೀಸರು ನೀಡಿರುವ ಮಾಹಿತಿ ಮೂಲಕ ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹದಲ್ಲಿ 19 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರದಲ್ಲಿ ಕಟ್ಟೆಚ್ಚರ!

Chandra Grahan 2026: ವರ್ಷದ ಕೊನೆಯ ಸುದೀರ್ಘ ಚಂದ್ರಗ್ರಹಣ; ಭಾರತದಲ್ಲಿ ಸೂತಕ ಕಾಲ ಇಲ್ಲ, ಯಾಕೆ ಗೊತ್ತ?

ಲಾಲ್ ಬಾಗ್-ಕಬ್ಬನ್ ಪಾರ್ಕ್ ನ 22 ಎಕರೆ ಜಾಗ ಪರಭಾರೆ?, ಬೆಂಗಳೂರಿನ ಪಾರ್ಕ್‌ಗಳಿಗೆ ಹೊಸ ಕಾಯ್ದೆ ಕಂಟಕ?; ರಾಜ್ಯಪಾಲರಿಗೆ ಸಂಸದ Tejasvi Surya ಪತ್ರ

2ನೇ ಟೆಸ್ಟ್ ಮೇಲೆ ಭಾರತ ಬಿಗಿ ಹಿಡಿತ: ಮಳೆಕಾಟದಿಂದ 4ನೇ ದಿನದಾಟ ಬೇಗನೇ ಅಂತ್ಯ

Toxic: ಭರ್ಜರಿ ಓಪನಿಂಗ್, ಮೊದಲ ದಿನವೇ ಪಠಾಣ್, ಅನಿಮಲ್ ದಾಖಲೆ ಉಡೀಸ್, ಸಂಜೆ ವೇಳೆಗೆ 70 ಕೋಟಿ ಗೂ ಅಧಿಕ ಕಲೆಕ್ಷನ್!