ನೇಪಾಳದ ಪ್ರಧಾನಿ ದೆವುಬಾ 5 ದಿನಗಳ ಬೇಟಿಗಾಗಿ ಭಾರತಕ್ಕೆ ಆಗಮನ
ಹೊಸದಿಲ್ಲಿ:: ನೇಪಾಳದ ಪ್ರಧಾನ ಮಂತ್ರಿ ಶೇರ್ ಬಹದ್ದೂರ್ ದೇವುಬಾ ಬುಧವಾರ ಐದು ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಪ್ರಧಾನಿ ದೇವುಬಾ ಅವರನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
2017 ರ ಜೂನ್ ತಿಂಗಳಲ್ಲಿ ನೇಪಾಳ ಪ್ರಧಾನಿ ಅಧಿಕಾರ ವಹಿಸಿಕೊಂಡ ನಂತರ ದೇವುಬಾ ರ ಮೊದಲ ವಿದೇಶ ಭೇಟಿ ಇದಾಗಿದೆ.
ಅವರು ಪತ್ನಿ ಅರ್ಜು ದೇವುಬಾ ರಾಣಾ, ಮಂತ್ರಿಗಳು, ಸಂಸದೀಯ ಸದಸ್ಯರು ಮತ್ತು ನೇಪಾಳ ಸರಕಾರದ ಹಿರಿಯ ಅಧಿಕಾರಿಗಳೊದನೆ ಆಗಮಿಸಿದ್ದಾರೆ.
ಈ ಭೇಟಿ ಸಮಯದಲ್ಲಿ, ನೇಪಾಳ ಪ್ರಧಾನಿ ಭಾರತದ ನೂತನ ಚುನಾಯಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಬೇಟಿ ಆಗಲಿದ್ದಾರೆ. ಅಲ್ಲದೆ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಲಿದ್ದಾರೆ
ಹೊಸದಿಲ್ಲಿಯ ಅಧಿಕೃತ ಭೇಟಿಯ ಹೊರತಾಗಿ, ಪ್ರಧಾನಿ ದೇವುಬಾ ಹೈದರಾಬಾದ್, ತಿರುಪತಿ ಮತ್ತು ಬೋಧಗಯಾಗೆ ಭೇಟಿ ನೀಡಲಿದ್ದಾರೆ.
ಅವರು ಭಾರತದಿಂದ ನೇಪಾಳಕ್ಕೆ ವಿದ್ಯುತ್ ಪ್ರಸರಣ ಮಾರ್ಗವನ್ನು ಉದ್ಘಾಟಿಸುತ್ತಿದ್ದಾರೆ. ದೇವುಬಾ ಭೇಟಿಯ ಸಮಯದಲ್ಲಿ ನೇಪಾಳದಲ್ಲಿ ಭಾರತೀಯ ಹೂಡಿಕೆ ಕುರಿತಾದ ಮಾತುಕತೆಯೊದನೆ ಪಂಚೇಶ್ವರ ಹೈಡ್ರೋಪವರ್ ಪ್ರಾಜೆಕ್ಟ್ ನ ಶಲಕ್ತಿ ಮತ್ತು ಸಂಪರ್ಕ ಸಹಕಾರ ಕುರಿತು ಚರ್ಚೆಯನ್ನು ನಿರೀಕ್ಷಿಸಲಾಗಿದೆ.
ಇದರೊಡನೆ ಖೈದಿಗಳ ಹಸ್ತಾಂತರ ಮತ್ತು ಪರಸ್ಪರ ಕಾನೂನು ನೆರವಿನ ಒಪ್ಪಂದಗಳು, ಕೋಶಿ ಅಣೆಕಟ್ಟಿನ ನಿರ್ಮಾಣದಿಂದ ಸಮಸ್ಯೆಗೆ ಸಿಲುಕಿದ ನೇಪಾಳಿ ಕುಟುಂಬಗಳಿಗೆ ಪರಿಹಾರ ಮತ್ತು ದಕ್ಷಿಣ ಭಾಗದ, ಬಾರತ ನಿಯಂತ್ರಣದಲ್ಲಿರುವ ಅಣೆಕಟ್ಟುಗಳ ನಿರ್ವಹಣೆ ಕುರಿತಂತೆ ಚರ್ಚೆ ನಡೆ೩ಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಧಾನಿ ಮೋದಿ ಭೇಟಿಯ ಸಮಯದಲ್ಲಿ ಅಣೆಕಟ್ಟುಗಳಿಗೆ ಸಂಬಂಧಿಸಿದಂತೆ ಚರ್ಚೆಗಳಿಗೆ ಮತ್ತು ನೇಪಾಳದಲ್ಲಿ ನಿರ್ಮಾಣಗೊಂಡ ಅಣೆಕಟ್ಟುಗಳು ಮತ್ತು ಪ್ರವಾಹ ನಿಯಂತ್ರಕ ಕಾರ್ಯವಿಧಾನಗಳು ಕುರಿತಂತೆ ಚರ್ಚೆಗಳು ನಡೆಯಲಿದೆ.
ಇತ್ತೀಚಿನ ವರ್ಷಗಳಲ್ಲಿ, ಭಾರತ-ನೇಪಾಳ ಸಹಕಾರ ಸಹಭಾಗಿತ್ವವು ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಬೆಳವಣಿಗೆಯನ್ನು ಕಂಡಿದೆ. ಈ ಭೇಟಿಯು ಪರಸ್ಪರ ಆಸಕ್ತಿಯ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸಲು ಮತ್ತು ಎರಡೂ ರಾಷ್ಟ್ರಗಳ ನಡುವಿನ ಸ್ನೇಹವನ್ನು ಇನ್ನಷ್ಟು ಉತ್ತಮಗೊಳಿಸಲು ಅವಕಾಶವನ್ನು ಒದಗಿಸುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos