ದೇಶ

ರಾಜೀವ್ ಹಂತಕನಿಗೆ ಪೆರೋಲ್: ಟವರ್ ಹತ್ತಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತ

Manjula VN
ಕೊವಿಲ್ಪಟ್ಟಿ: ದೇಶದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಹಂತಕರಲ್ಲಿ ಒಬ್ಬನಾದ ಎ.ಜಿ. ಪೆರಾರಿವಾಲನ್'ಗೆ ಪೆರೋಲ್ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೊಬ್ಬ ಟವರ್ ಹತ್ತಿ ಪ್ರತಿಭಟನೆ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ. 
ಪೆರಾರಿವಾಲನ್'ಗೆ ನೀಡಿದ್ದ ಪೆರೋಲ್'ಗೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತನೊಬ್ಬ ತಮಿಳುನಾಡಿನ ಕೊವಿಲ್ಪಟ್ಟಿ ಎಂಬಲ್ಲಿ ಮೊಬೈಲ್ ಟವರ್ ಹತ್ತಿದ್ದ ಪ್ರತಿಭಟನೆ ನಡೆಸಿದ್ದಾನೆ. 
ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಮೊಬೈಲ್ ಟವರ್ ಹತ್ತಿರುವ ಕಾಂಗ್ರೆಸ್ ಕಾರ್ಯಕರ್ತ, ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ ಭಾವಚಿತ್ರವನ್ನು ಪ್ರದರ್ಶಿಸಿದ್ದಾನೆ. ಅಲ್ಲದೆ, ಪೆರಾರಿವಾಲನ್ ಗೆ ನೀಡಿರುವ ಪೆರೋಲ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾನೆಂದು ತಿಳಿದುಬಂದಿದೆ. 
ಕಳೆದ 26 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಪೆರಾರಿವಾಲನ್'ಗೆ ಪೆರೋಲ್ ಮೇಲೆ ಹೊರ ಬಿಡುವಂತೆ ಪೆರಾರಿವಾಲನ್ ಅವರ ತಾಯಿ ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ, ಮೊದಲ ಬಾರಿಗೆ ಹಂತಕನೊಬ್ಬನಿಗೆ 30 ದಿನಗಳ ಕಾಲ ಜೈಲಿನಿಂದ ಮುಕ್ತನಾಗುವ ಅವಕಾಶವನ್ನು ನೀಡಿತ್ತು. 
SCROLL FOR NEXT