ದೇಶ

ಭೂಪಾಲ್: ಪಂಚಮುಖಿ ಹನುಮಾನ್ ದೇವಸ್ಥಾನದ ಮೇಲೆ ಪಾಕ್ ರಾಷ್ಟ್ರಧ್ವಜ ಹೋಲುವ ಬಾವುಟ ಹಾರಾಟ

Vishwanath S
ಭೂಪಾಲ್: ಮಧ್ಯಪ್ರದೇಶದ ಭೂಪಾಲ್ ನ ನರ್ಸಿಂಗ್ ಪುರ್ ನಗರದಲ್ಲಿನ ಪಂಚಮುಖಿ ಹನುಮಾನ್ ದೇವಾಲಯದ ಮೇಲೆ ಕಿಡಿಗೇಡಿಗಳು ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಹೋಲುವ ಬಾವುಟವನ್ನು ಹಾರಿಸಿದ್ದು ಇದೀಗ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. 
ಈ ಸಂಬಂಧ ನರ್ಸಿಂಗ್ ಪುರದಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು ಎಚ್ಚರಿಕೆಯ ಕ್ರಮವಾಗಿ ಸಿಆರ್‍‍ಪಿಎಫ್ ಯೋಧರನ್ನು ಜಮಾವಣೆ ಮಾಡಲಾಗಿದೆ. 
ಗುರುವಾರ ಹನುಮಾನ್ ದೇವಾಲಯದ ಮೇಲೆ ಪಾಕಿಸ್ತಾನ ಧ್ವಜ ಹಾರಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ಪೊಲೀಸರು ಭಾವುಟ ತೆರವುಗೊಳಿಸುವಂತೆ ದೇವಾಲಯದ ಪೂಜಾರಿ ಸೂಚಿಸಿದ್ದಾರೆ. ಅಂತೆ ಪೂಜಾರಿ ಭಾವುಟವನ್ನು ತೆಗೆದಿದ್ದಾರೆ. ಇದೇ ವೇಳೆ ದೇವಾಲಯದ ಗೋಡೆ ಮೇಲೆ ಸಂದೇಶವನ್ನು ಬರೆದಿದ್ದು ಅದರಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಅಳಿಸಿಹಾಕುವ ಬೆದರಿಕೆಯನ್ನು ಹಾಕಿದ್ದಾರೆ. 
ಈ ಸಂಬಂಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನು ದೇವಾಲಯದಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿನ ದೃಶ್ಯವಳಿಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದು ದುಷ್ಕರ್ಮಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಡಿಐಜಿ ಡಾ. ಜಿಕೆ ಪಾಠಕ್ ತಿಳಿಸಿದ್ದಾರೆ. 
SCROLL FOR NEXT