ನವದೆಹಲಿ: ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾಂಸ ರಪ್ತುದಾರ ಹಾಗೂ ಹಣಕಾಸು ದಂಧೆ ಹಾಗೂ ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ಮೊಯಿನ್ ಖುರೇಷಿಯನ್ನು ಬಂಧಿಸಿದ್ದಾರೆ.
ಶುಕ್ರವಾರ ರಾತ್ರಿ ಖುರೇಷಿಯನ್ನು ಬಂಧಿಸಿರುವ ಇಡಿ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
ಹವಾಲಾ ರೀತಿಯ ಹಣಕಾಸು ದಂಧೆ ಹಾಗೂ ಆದಾಯ ತೆರಿಗೆ ವಂಚನೆ ಹಿನ್ನೆಲೆಯಲ್ಲಿ
2016 ರಲ್ಲಿ ಇಡಿ ಅಧಿಕಾರಿಗಳು ಖುರೇಷಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಖುರೇಷಿ ಹವಾಲಾ ಹಣವನ್ನು ದುಬೈ, ಲಂಡನ್ ಸೇರಿದಂತೆ ಯೂರೊಪಿನ ಹಲವು ಭಾಗಗಳಲ್ಲಿ ಹವಾಲಾ ಹಣ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ತನಿಖೆ ನಡೆಸಲಾಗುತ್ತಿದೆ.