ಅಲೋಮೋರಾ: ಡೋಕ್ಲಾಂ ಗಡಿ ವಿಚಾರವಾಗಿ ಭಾರತ-ಚೀನಾ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು ಈ ಮಧ್ಯೆ ಉತ್ತರಖಂಡದ ಪಿಥೋರಘರ್ ಜಿಲ್ಲೆಯಲ್ಲಿನ ಅಲೋಮೋರದ ಚಪ್ಪಲಿ ಅಂಗಡಿಯಲ್ಲಿ ತ್ರಿವರ್ಣಧ್ವಜದ ಬಾಕ್ಸ್ ಗಳಲ್ಲಿ ಚೀನಾ ಶೂಗಳನ್ನು ಪ್ಯಾಕ್ ಮಾಡಲಾಗಿದ್ದು ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆ ಶೂ ಬಾಕ್ಸ್ ಗಳ ಮೇಲೆ ಚೀನೀ ಪದಗಳಿಂದ ಬರೆಯಲಾಗಿದ್ದು 2017ರ ಆಮದು ವರ್ಷವನ್ನು ಗುರುತಿಸಲಾಗಿದೆ. ಮಾಲೀಕ ಬಿಶನ್ ಸಿಂಗ್ ಬೋರಾ ಚಪ್ಪಲಿ ಅಂಗಡಿಯಲ್ಲಿ ಈ ರೀತಿಯ ಉತ್ಪನ್ನಗಳ ಆಮದಾಗಿದ್ದು, ಅವುಗಳನ್ನು ಉಧಮ್ ಸಿಂಗ್ ನಗರ್ ಜಿಲ್ಲೆಯ ರುದ್ರಪುರ ಮೂಲದ ವ್ಯಾಪಾರಿಯಿಂದ ಇವುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಶೂಗಳನ್ನು ಪರೀಕ್ಷಿಸಲು ತೆರೆದಾಗ ಬಾಕ್ಸ್ ಗಳ ಮೇಲೆ ತ್ರಿವರ್ಣ ಧ್ವಜವನ್ನು ಮುದ್ರಿಸಲಾಗಿತ್ತು. ಆ ಕೂಡಲೇ ನಾನು ಅಲೋಮೋರಾ ಪೊಲೀಸರಿಗೆ ಸುದ್ದಿ ತಿಳಿಸಿದ್ದಾಗಿ ಬೋರಾ ತಿಳಿಸಿದ್ದಾರೆ.
ಇನ್ನು ಉತ್ಪನ್ನಗಳನ್ನು ವಶ ಪಡಿಸಿಕೊಂಡಿರುವ ಪೊಲೀಸರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂದು 1971ರ ರಾಷ್ಟ್ರೀಯ ಗೌರವ ಕಾಯ್ದೆಯ ವಿಭಾಗ 2ರ ಅಡಿಯಲ್ಲಿ ತಮನ್ನ ಫುಟ್ವೇರ್ ಕಂಪನಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಪೊಲೀಸರ ಪ್ರಾರ್ಥಮಿಕ ತನಿಖೆಯಲ್ಲಿ ಈ ಉತ್ಪನ್ನಗಳು ಮೊದಲಿಗೆ ದೆಹಲಿಗೆ ಆಮದಾಗಿದ್ದು ಅಲ್ಲಿದ್ದ ರುದ್ರಪುರಕ್ಕೆ ಸಾಗಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics