ನವದೆಹಲಿ: 50 ಲಕ್ಷ ಇನ್ಶೂರೆನ್ಸ್ ಹಣ ಮತ್ತು ಆಸ್ತಿಗಾಗಿ ಸ್ವಂತ ಸಹೋದರಿಯನ್ನೇ ಸಹೋದರ ಹತ್ಯೆ ಮಾಡಿರುವ ಘಟನೆ ಉತ್ತರ ದೆಹಲಿಯಲ್ಲಿ ನಡೆದಿದೆ.
ರಕ್ಷಾಬಂಧನ ಉಡುಗೊರೆ ಎಂದು ಸಹೋದರಿ 45 ವರ್ಷದ ಅನಿತಾ ಅವರ ಹೆಸರಲ್ಲಿ 50 ಲಕ್ಷಕ್ಕೆ ಇನ್ಶೂರೆನ್ಸ್ ಮಾಡಿದ್ದ ಆರೋಪಿ ಕಮಲ್ ಆ ಹಣಕ್ಕಾಗಿ ಸಹೋದರಿಯನ್ನೇ ಕೊಂದು ಆರೋಪವನ್ನು ಸಹೋದರಿಯ ಗಂಡನ ಮೇಲೆ ಬರುವಂತೆ ಯೋಜನೆ ರೂಪಿಸಿದ್ದ ಆದರೆ ಪೊಲೀಸರ ತನಿಖೆ ವೇಳೆ ಕಮಲ್ ತಾನು ಮಾಡಿರುವ ಹೀನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಎಸಿಪಿ ಅಶೋಕ್ ತ್ಯಾಗಿ ಮತ್ತು ಎಸ್ಎಚ್ಒ ಮನೋಜ್ ಕುಮಾರ್ ನೇತೃತ್ವದಲ್ಲಿ ನಡೆದ ತನಿಖೆ ವೇಳೆ ಕಮಲ್ ತಾನು ಸಹೋದರಿಯ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕಮಲ್ ಎರಡು ಮದುವೆಯಾಗಿದ್ದು ಮೊದಲ ಪತ್ನಿಗೆ ಐವರು ಗಂಡು ಮಕ್ಕಳು ಇದರಲ್ಲಿ ಇಬ್ಬರಿಗೆ ಮದುವೆಯಾಗಿದೆ. ಇನ್ನು ಕಮಲ್ 2016ರಲ್ಲಿ ಮೂರು ಮಕ್ಕಳ ತಾಯಿಯನ್ನು ಮದುವೆಯಾಗಿದ್ದಾನೆ.
ಕುಟುಂಬ ದೊಡ್ಡದಾಗಿದ್ದರಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕಮಲ್ ಗೆ ಪರಿಸ್ಥಿತಿ ಇಕ್ಕಟ್ಟಾಗಿದೆ. ಆಗ ಆತನ ಕಣ್ಣು ಬಿದ್ದಿದ್ದು ಸಹೋದರಿಯ ಸ್ವಂತ ಆಸ್ತಿ ಮೇಲೆ. ಅನಿಲ್ ಅವರಿಗೆ ಎರಡು ಮನೆಯಿತ್ತು. ಒಂದರಲ್ಲಿ ಅನಿತ ಮತ್ತು ಆತನ ಪತ್ನಿ ವಾಸವಾಗಿದ್ದರು. ಇನ್ನೊಂದು ಮನೆಯಲ್ಲಿ ಕಮಲ್ ರ ಮದುವೆಯಾಗಿದ್ದ ಹಿರಿಯರಿಬ್ಬರು ಮಕ್ಕಳು ವಾಸವಾಗಿದ್ದರು.
ಕೊಲೆ ಮಾಡಿದ ದಿನ ಕಮಲ್ ಸಹೋದರಿಯ ಮನೆಯಲ್ಲಿ ಮಲಗಿಕೊಳ್ಳಲು ತೆರಳಿದ್ದಾನೆ. ಈ ವೇಳೆ ಅನಿತ ಕೋಣೆಯಲ್ಲಿ ಒಬ್ಬಳೆ ಮಲಗಿರುವುದನ್ನು ಗಮನಿಸಿ ನಂತರ ತನ್ನ ಎರಡನೇ ಹೆಂಡತಿಯ ಮಕ್ಕಳಾದ ಚಂದನ್ ಮತ್ತು ಕುಂದನ್ ನನ್ನು ಕರೆದುಕೊಂಡು ಕತ್ತು ಕೂಯ್ದು ಹತ್ಯೆ ಮಾಡಿ ಹೊರಟು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದರೆ.