ಲಾಲು ರ್ಯಾಲಿಯಲ್ಲಿ ಭಾಗವಹಿಸಿದ್ದ ಜೆಡಿಯು ವರಿಷ್ಠ ಶರದ್ ಯಾದವ್ 
ದೇಶ

ರಾಷ್ಟ್ರಮಟ್ಟದಲ್ಲಿ ಮತ್ತೊಂದು "ಮಹಾಮೈತ್ರಿ ಕೂಟ" ರಚಿಸುತ್ತೇವೆ: ಶರದ್ ಯಾದವ್

ಎನ್ ಡಿಎ ಮೈತ್ರಿಕೂಟವನ್ನು ಮಣಿಸಲು ರಾಷ್ಟ್ರಮಟ್ಟದಲ್ಲಿ ಮತ್ತೊಂದು ‘ಮಹಾಮೈತ್ರಿ’ಯನ್ನು ರಚಿಸುತ್ತೇವೆ ಎಂದು ಜೆಡಿಯು ಬಂಡಾಯ ನಾಯಕ ಶರದ್ ಯಾದವ್ ಭಾನುವಾರ ಹೇಳಿದ್ದಾರೆ.

ಪಾಟ್ನಾ: ಎನ್ ಡಿಎ ಮೈತ್ರಿಕೂಟವನ್ನು ಮಣಿಸಲು ರಾಷ್ಟ್ರಮಟ್ಟದಲ್ಲಿ ಮತ್ತೊಂದು ‘ಮಹಾಮೈತ್ರಿ’ಯನ್ನು ರಚಿಸುತ್ತೇವೆ ಎಂದು ಜೆಡಿಯು ಬಂಡಾಯ ನಾಯಕ ಶರದ್ ಯಾದವ್ ಭಾನುವಾರ ಹೇಳಿದ್ದಾರೆ.

ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಪಾಟ್ನಾದಲ್ಲಿ ಹಮ್ಮಿಕೊಂಡಿದ್ದ ‘ಬಿಜೆಪಿ ತೊಲಗಿಸಿ-ದೇಶ ಉಳಿಸಿ’ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಶರದ್ ಯಾದವ್ ಅವರು, ರಾಷ್ಟ್ರಮಟ್ಟದಲ್ಲಿ  ಮತ್ತೊಂದು ಮಹಾಮೈತ್ರಿಯನ್ನು ನಾವು ರಚಿಸುತ್ತೇವೆ ಎಂದು ಬಿಹಾರದಲ್ಲಿ ಮಹಾಮೈತ್ರಿಯನ್ನು ಮುರಿದವರಿಗೆ ಹೇಳಲು ಇಚ್ಛಿಸುತ್ತೇನೆ ಎಂದು ಹೇಳಿದರು.

ಆ ಮೂಲಕ ನೇರವಾಗಿ ಸಿಎಂ ನಿತೀಶ್ ಕುಮಾರ್ ಅವರನ್ನು ಕೇಂದ್ರವಾಗಿಸಿಕೊಂಡ ಶರದ್ ಯಾದವ್ ಅವರು, ಬಿಹಾರದಲ್ಲಿ ಜೆಡಿಯು-ಆರ್ ಜೆಡಿ ಹಾಗೂ ಕಾಂಗ್ರೆಸ್ ಮಹಾಮೈತ್ರಿಯನ್ನು ಮುರಿದಿರುವುದು ಬಿಹಾರದ ಜನತೆಗೆ  ಮಾಡಿದ ನಂಬಿಕೆದ್ರೋಹವಾಗಿದೆ ಹಾಗೂ ಅವರ ಆದೇಶದ ವಿರುದ್ಧವಾಗಿದೆ. ಜನರಿಗೆ ಮೋಸ ಮಾಡಲಾಗಿದೆ. 1.25 ಕೋಟಿ ಜನರ ಮಹಾಮೈತ್ರಿಯನ್ನು ಸ್ಥಾಪಿಸುವುದಕ್ಕಾಗಿ ದೇಶದ ಮೂಲೆಮೂಲೆಗೂ ಭೇಟಿ ನೀಡುತ್ತೇನೆ ಎಂದು  ಹೇಳಿದರು.

ಇದೇ ವೇಳೆ "ರಾಜಕೀಯದಲ್ಲಿ ಧರ್ಮ ವಿಲೀನವಾದರೆ ಅಲ್ಲಿ ದೊಡ್ಡ ದುರಂತವೇ ಸಂಭವಿಸುತ್ತದೆ. ಇದೇ ದುರಂತ ಇರಾಕ್ ಮತ್ತು ಆಫ್ಘಾನಿಸ್ತಾನ ದೇಶಗಳಲ್ಲಾಗಿದೆ. ಆ ದೇಶಗಳಲ್ಲಿ ಇಂದಿಗೂ ಜನ ಜೀವನ ಸಾಗಿಸಲು  ಪರದಾಡುತ್ತಿದ್ದಾರೆ. ಬಿಜೆಪಿ ದೇಶವನ್ನು ವಿಭಜಿಸುವತ್ತ ಚಿತ್ತ ನೆಟ್ಟಿದೆ. ಆದರೆ ಅದಕ್ಕೆ ನಾನು ನನ್ನ ಕೊನೆಯ ಉಸಿರು ಇರುವವರೆಗೂ ಬಿಡುವುದಿಲ್ಲ. ಕಳೆದ 43 ವರ್ಷಗಳಿಂದ ನಾನು ಸಂಸದನಾಗಿದ್ದೇನೆ. ನನ್ನ ಅಂತಿಮ ಕ್ಷಣದವರೆಗೂ  ಹೋರಾಟ ಮಾಡುತ್ತೇನೆ. ಇನ್ನು ಕೆಲವೇ ದಿನಗಳಲ್ಲಿ ಜೆಡಿಯು ನಮ್ಮ ಪಕ್ಷ ಎಂಬುದನ್ನು ಸಾಬೀತು ಮಾಡಿ ತೋರಿಸುತ್ತೇನೆ ಎಂದು ಶರದ್ ಯಾದವ್ ಸವಾಲು ಹಾಕಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!