ದೇಶ

ಪ್ರಧಾನಿಯವರೇ, ನೀವು ರಾಷ್ಟ್ರವಂಚನೆಯಲ್ಲಿ ಮೌನವಾಗಿ ಭಾಗಿಯಾಗಿದ್ದೀರಿ: ರಾಮ್ ಜೇಠ್ಮಲಾನಿ

Sumana Upadhyaya
ನವದೆಹಲಿ:ಖ್ಯಾತ ನ್ಯಾಯವಾದಿ ಮತ್ತು ರಾಜ್ಯಸಭಾ ಸದಸ್ಯ ರಾಮ್ ಜೇಠ್ಮಲಾನಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಟುವಾಗಿ ಟೀಕಿಸಿ ಬರೆದ ಬಹಿರಂಗ ಪತ್ರ ಇದೀಗ ಸದ್ದು ಮಾಡುತ್ತಿದೆ.
ಪತ್ರದಲ್ಲಿ, ವಿದೇಶದಲ್ಲಿ ಹೂಡಿದ ಕಪ್ಪು ಹಣವನ್ನು ಹಿಂಪಡೆಯುವ ಭರವಸೆ ನೀಡಿದ ಪ್ರಧಾನಿ ಅದರಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.
2014ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ನೀವು ನೀಡಿರುವ ಅನೇಕ ಭರವಸೆಗಳು, ಆಶ್ವಾಸನೆಗಳನ್ನು ಈಡೇರಿಸಿಲ್ಲ. 90 ಲಕ್ಷ ಕೋಟಿ ರೂಪಾಯಿ ಕಪ್ಪು ಹಣವನ್ನು ವಿದೇಶದಿಂದ ತರಿಸುವುದಾಗಿ ನೀಡಿರುವ ಆಶ್ವಾಸನೆಗಳು ಮೂರೂವರೆ ವರ್ಷಗಳ ಆಡಳಿತ ನಂತರವೂ ಈಡೇರಿಲ್ಲ. ಪ್ರತಿ ಬಡ ಭಾರತೀಯರ ಬ್ಯಾಂಕ್ ಖಾತೆಗಳಲ್ಲಿ 15 ಲಕ್ಷ ಇಡುವುದಾಗಿ ನೀಡಿದ್ದ ಭರವಸೆಯನ್ನು ಕೂಡ ಈಡೇರಿಸಿಲ್ಲ. ಭಾರತ ದೇಶದ ಜನರು ಹಿಂದೆ ಏನು ನಡೆಯಿತು ಎಂಬುದನ್ನು ತಿಳಿಯಲು ಬಯಸುತ್ತಿಲ್ಲ. ಮುಂದೆ ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ತಿಳಿಯಲು ಬಯಸುತ್ತಾರೆ. ನೀವು ದೇಶದ ದೇಶದ ಜನತೆಗೆ ಮೋಸ ಮಾಡುತ್ತಿದ್ದೀರಿ ಎಂದು ರಾಮ್ ಜೇಠ್ಮಲಾನಿ ಪತ್ರದಲ್ಲಿ ಆರೋಪಿಸಿದ್ದಾರೆ.
ಮೋದಿ ಸರ್ಕಾರದ ಬಗ್ಗೆ ಅವರ ಮತ್ತು ಜನರ ನಿರೀಕ್ಷೆಗಳು, ಜನರಿಗೆ ನೀಡಿದ್ದ ಆಶ್ವಾಸನೆಗಳಲ್ಲಿ ವಿಫಲರಾಗಿರುವ ಕುರಿತು ರಾಮ್ ಜೇಠ್ಮಲಾನಿ ತಮ್ಮ ವೆಬ್ ಸೈಟ್ ನ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ಅವರ ಪತ್ರದಲ್ಲಿ ಈ ಕೆಳಗಿನಂತೆ ಬರೆಯಲಾಗಿದೆ.
SCROLL FOR NEXT