ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ 
ದೇಶ

ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟ ಆಹಾರ': ಪಾಕ್ ನಿಂದ ವಿಡಿಯೋ ದುರ್ಬಳಕೆ

ಭಾರತದ ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆಱೋಪಿಸಿ ಬಿಎಸ್ಎಫ್ ಯೋಧ ಮಾಡಿದ್ದ ವಿಡಿಯೋವನ್ನು ಪಾಕಿಸ್ತಾನ ದುರ್ಬಳಕೆ ಮಾಡಿಕೊಳ್ಳಲು ಯತ್ನ ನಡೆಸುತ್ತಿದೆ ಎಂಬ...

ನವದೆಹಲಿ: ಭಾರತದ ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಬಿಎಸ್ಎಫ್ ಯೋಧ ಮಾಡಿದ್ದ ವಿಡಿಯೋವನ್ನು ಪಾಕಿಸ್ತಾನ ದುರ್ಬಳಕೆ ಮಾಡಿಕೊಳ್ಳಲು ಯತ್ನ ನಡೆಸುತ್ತಿದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. 
ಯೋಧರಿ ವಿತರಿಸಲಾಗುತ್ತಿರುವ ಆಹಾರವು ಉತ್ತಮ ಗುಣಮಟ್ಟದ್ದಾಗಿದ್ದು, ಇದರ ಸತ್ಯಾಸತ್ಯತೆಯನ್ನು ಯಾರು ಬೇಕಾದರೂ ಪರೀಕ್ಷಿಸಬಹುದು ಎಂದು ಬಿಎಸ್ಎಫ್ ಮುಖ್ಯಸ್ಥ ಕೆ.ಕೆ. ಶರ್ಮಾ ಅವರು ಸವಾಲು ಹಾಕಿದ್ದಾರೆ. 
ಇದೇ ವೇಲೆ ಸೇನೆಯಲ್ಲಿ ವಿತರಿಸಲಾದ ಆಹಾರವು ಕಳಪೆ ಗುಣಮಟ್ಟದ್ದಾಗಿದೆ ಎಂಬ ತೇಜ್ ಬಹದ್ದೂರ್ ಯಾದವ್ ಅವರ ವಿಡಿಯೋ ದುರುಪಯೋಗದ ಮೂಲಕ ಸೈನಿಕರ ಆತ್ಮಸ್ಥೈರ್ಯವನ್ನು ಕುಸಿಯುಂತೆ ಮಾಡಲು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಯತ್ನಿಸುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. 
ನಿನ್ನೆಯಷ್ಟೇ ಮಾಧ್ಯಮಗಳೊಂದಿಗೆ ಮಾಡನಾಡಿಕುವ ಕೆ.ಕೆ. ಶರ್ಮಾ ಅವರು, 2012ರಲ್ಲಿ ಹೆಚ್ಚುವರಿ ಡಿಜಿಯಾಗಿ ಬಿಎಸ್ಎಫ್ ಗೆ ಸೇರಿದ್ದೇನೆ. ಯೋಧರಾಗಲೀ ಅಥವಾ ಅಧಿಕಾರಿಗಳೇ ಆಗಲೀ ಆಹಾರದ ಬಗ್ಗೆ ದೂರು ನೀಡಿಲ್ಲ. ಹಾಗಾಗಿ ಸೇನೆಯಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಸುತ್ತಿದ್ದಾರೆಂಬ ತೇಜ್ ಬಹದ್ದೂರ್ ವಿಡಿಯೋ ಕುರಿತು ಸಿಟ್ಟು ಬಂದಿತ್ತು. ಆದರೆ, ವರ್ಗಾವಣೆ ಮತ್ತು ಪೋಸ್ಟಿಂಗ್ ಕುರಿತು ಕೆಲ ಸಮಸ್ಯೆಗಳಿವೆ ಎಂದು ತಿಳಿಸಿದ್ದಾರೆ. 
ಈ ಹಿಂದೆ ಬಿಎಸ್ ಎಫ್ ನ ಯೋಧ ತೇಜ್ ಬಹದ್ದೂರ್ ಯಾದವ್ ಅವರು, ಗಡಿಯಲ್ಲಿ ನಿಂತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು. ತಮಗೆ ನೀಡುತ್ತಿರುವ ಆಹಾರ ಕಳಪೆ ಮಟ್ಟದಾಗಿದೆ ಎಂದು  ಹೇಳಿಕೊಂಡಿದ್ದರು. ಇದಾದ ಬಳಿಕ ಕೆಲ ಸೈನಿಕರು ಸರಣಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಟ್ಟಿದ್ದರು. ಇದರಿಂದ ಸೇನೆ ಹಾಗೂ ಕೇಂದ್ರ ಸರ್ಕಾರ ಮುಜುಗರಕ್ಕೀಡಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT