ನವದೆಹಲಿ: ಭಾರತದಲ್ಲಿ ಸರಣಿ ರೈಲು ಅಪಘಾತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಜಪಾನ್ ತಜ್ಞರಿಂದ ರೈಲು ಸುರಕ್ಷತೆಯ ಪರಿಶೀಲನೆ ನಡೆಸಲಿದೆ.
ಭಾರತಕ್ಕೆ ಜಪಾನ್ ತಜ್ಞರ ತಂಡ ಆಗಮಿಸಿರುವುದನ್ನು ಸ್ವತಃ ಭಾರತದಲ್ಲಿರುವ ಜಪಾನ್ ನ ರಾಯಭಾರಿ ಕಚೇರಿ ಸ್ಪಷ್ಟಪಡಿಸಿದ್ದು, ರೈಲ್ವೆ ಇಲಾಖೆಗೆ ಸಂಬಂಧಿಸಿದ ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ ( ಜೆಐಸಿಎ) ಹಾಗೂ ಭೂಮಿ, ಮೂಲಸೌಕರ್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಇಲಾಖೆಯ ತಜ್ಞರು ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ.
ಭಾರತದಲ್ಲಿ ಪ್ರಸ್ತುತ ಇರುವ ರೈಲ್ವೆ ಸುರಕ್ಷತೆ ಬಗ್ಗೆ ತಜ್ಞರ ತಂಡ ಮೊದಲು ಪರಿಶೀಲನೆ ನಡೆಸಲಿದ್ದು, ಸುರಕ್ಷತೆಯನ್ನು ಸುಧಾರಣೆ ಮಾಡಬೇಕಿರುವ ಅಂಶಗಳ ಬಗ್ಗೆ ಸಲಹೆ ನೀಡಲಿದೆ.