ಬಾಬಾ ರಾಮ್ ರಹೀಮ್ ಕುಟುಂಬ 
ದೇಶ

ಬಾಬಾ ರಾಮ್ ರಹೀಮ್ ಜೈಲುಪಾಲು ಬಳಿಕ, ಈಗ ಉತ್ತರಾಧಿಕಾರಿಗಾಗಿ ಕಿತ್ತಾಟ!

ಬಾಬಾ ರಾಮ್ ರಹೀಮ್ ಗೆ ಸಿಬಿಐ ವಿಶೇಷ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸುತ್ತಿದ್ದಂತೆಯೇ ಅತ್ತ ಸಚ್ಚಾ ಡೇರಾ ಸೌಧದಲ್ಲಿ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಭಾರಿ ಮಹತ್ವ ಪಡೆದಿದೆ.

ರೋಹ್ಟಕ್: ಬಾಬಾ ರಾಮ್ ರಹೀಮ್ ಗೆ ಸಿಬಿಐ ವಿಶೇಷ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸುತ್ತಿದ್ದಂತೆಯೇ ಅತ್ತ ಸಚ್ಚಾ ಡೇರಾ ಸೌಧದಲ್ಲಿ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಭಾರಿ ಮಹತ್ವ ಪಡೆದಿದೆ.

ಮೂಲಗಳ ಪ್ರಕಾರ ಈಗಾಗಲೇ ಡೇರಾ ಸೌಧದಲ್ಲಿ ಮುಂದಿನ ಬಾಬಾ ಉತ್ತರಾಧಿಕಾರಿಗಾಗಿ ಭಾರಿ ಚರ್ಚೆಗಳು ನಡೆಯುತ್ತಿದ್ದು, ಪ್ರಮುಖವಾಗಿ ಬಾಬಾ ಕುಟುಂಬಸ್ಥರಲ್ಲಿ ಒಬ್ಬರು ಉತ್ತರಾಧಿಕಾರಿಯಾಗುವ ಸಾಧ್ಯತೆ ಇದೆ ಎಂದು  ಹೇಳಲಾಗುತ್ತಿದೆ. ಇನ್ನು ಉತ್ತರಾಧಿಕಾರಿ ರೇಸ್ ನಲ್ಲಿ ಬಾಬಾ ಮಗ ಜಸ್ಮೀತ್ ಇನ್ಸಾನ್, ದತ್ತು ಪುತ್ರಿ ಹನಿಪ್ರೀತ್‌ ಇನ್ಸಾನ್‌ ಮತ್ತು ಡೇರಾ ಮುಖ್ಯಸ್ಥೆ ವಿಪಾಸನಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಪ್ರಸ್ತುತ ಡೇರಾ ಮುಖ್ಯಸ್ಥೆಯಾಗಿರುವ ವಿಪಾಸನಾ ಇನ್ಸಾನ್ ‌(35 ವರ್ಷ) ಮತ್ತು ಬಾಬಾನ ದತ್ತು ಪುತ್ರಿ ಹನಿಪ್ರೀತ್‌ ಇನ್ಸಾನ್‌ ನಡುವೆ ಪಟ್ಟಕ್ಕಾಗಿ ಪೈಪೋಟಿ ಆರಂಭವಾಗಿದೆ. ತೀರ್ಪು ಹೊರಬೀಳುತ್ತಿದ್ದಂತೆ ವಿಪಾಸನಾ,  "ಶಾಂತಿಯಿಂದಿರಿ" ಎಂದು ಬೆಂಬಲಿಗರಿಗೆ ಕರೆ ಕೊಡುವ ಮೂಲಕ ತಾನೇ ಉತ್ತರಾಧಿಕಾರಿ ಎಂಬಂತೆ ವರ್ತಿಸಿದ್ದಾರೆ. ಈಕೆ ಕಾಲೇಜು ಮುಗಿಸಿ ನೇರವಾಗಿ ಡೇರಾಗೆ ಸೇರಿದ್ದು, ಡೇರಾದಲ್ಲಿ ಎರಡನೇ ಪ್ರಮುಖ ಹುದ್ದೆಯನ್ನು  ಅಲಂಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಬಾಬಾ ದತ್ತು ಪುತ್ರಿ ಹನಿಪ್ರೀತ್‌ ತನ್ನನ್ನು ತಾನು "ಅಪ್ಪನ ದೇವಕನ್ಯೆ" ಎಂದು ಹೇಳಿ ಕೊಂಡಿದ್ದು, ಯಾವಾಗಲೂ ರಾಮ್ ರಹೀಂ ಜತೆಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ದೋಷಿ ಎಂದು ಪ್ರಕಟವಾದ ದಿನವೂ ಜೈಲಿಗೆ ಹೋಗು  ವಾಗ ರಾಮ್ ರಹೀಂಗೆ ಸಾಥ್‌ ನೀಡಿದ್ದು ಈಕೆಯೇ. ವಿಪಾಸನಾ ಮತ್ತು ಹನಿಪ್ರೀತ್‌ ಇಬ್ಬರೂ ತಮ್ಮನ್ನು ತಾವು "ಗುರು ಬ್ರಹ್ಮಚಾರಿ'ಗಳೆಂದು ಘೋಷಿಸಿಕೊಂಡಿದ್ದಾರೆ.

ಪುತ್ರ ಜಸ್ಮೀತ್ ಇನ್ಸಾನ್ ಮುಂದಿನ ಬಾಬಾ ಉತ್ತರಾಧಿಕಾರಿ?
ಇನ್ನು ಬಾಬಾ ರಾಮ್ ರಹೀಮ್ ಅವರ ತಾಯಿ ನಸೀಬ್ ಕೌರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮೊಮ್ಮಗ ಅಂದರೆ ಬಾಬಾ ರಾಮ್ ರಹೀಮ್ ಮಗ ಜಸ್ಮೀತ್ ಇನ್ಸಾನ್ ಮುಂದಿನ ಬಾಬಾ ಉತ್ತರಾಧಿಕಾರಿ ಎಂದು  ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸಂಸ್ಥೆಯ ಕೋರ್ ಕಮಿಟಿ ಸಭೆಯಲ್ಲೂ ನಸೀಬ್ ಕೌರ್ ಅವರು ಚರ್ಚೆ ನಡೆಸಿದ್ದು, ಸಂಸ್ಥೆಯಿಂದ ಉತ್ತರಾಧಿಕಾರಿ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಹೊರಬೀಳಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT