ಅಹಮದಾಬಾದ್: ಹಲ್ಲೆ ಪ್ರಕರಣ ಸಂಬಂಧ ಪಟೇಲ್ ಕೋಟಾ ಹೋರಾಟಗಾರ ಹಾರ್ಧಿಕ್ ಪಟೇಲ್ ಮತ್ತು ಆತನ ಸಹಚರ ದಿನೇಶ್ ಬಂಬಾನಿಯಾನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಗುಜರಾತ್ ನ ಪಟಾನ್ ನಗರದಲ್ಲಿ ಹಾರ್ದಿಕ್ ಪಟೇಲ್ ವಿರುದ್ಧ ದೂರು ನರೇಂದ್ರ ಪಟೇಲ್ ಎಂಬುವರು ದೂರು ದಾಖಲಿಸಿದ್ದರು.
ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಾರ್ದಿಕ್ ಪಟೇಲ್ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಆನಂದ್ ಜಿಲ್ಲೆಯಲ್ಲಿ ವಶಕ್ಕೆ ಪಡೆದ ಪೊಲೀಸರು ಹಾರ್ದಿಕ್ ಪಟೇಲ್ ನನ್ನು ಪಟಾನ್ ಪೊಲೀಸರ ಸುಪರ್ದಿಗೆ ನೀಡಿದ್ದಾರೆ. ದಿನೇಶ್ ಬಂಬಾನಿಯಾನನ್ನು ಪೊಲೀಸರು ರಾಜ್ ಕೋಟ್ ನಲ್ಲಿ ವಶಕ್ಕೆ ಪಡೆದಿದ್ದಾರೆ.