ದೇಶ

ಓವರ್​ಟೇಕ್ ಮಾಡಿದ್ದಕ್ಕೆ ಯುವಕನ ಹತ್ಯೆ: ಜೆಡಿಯು ನಾಯಕಿಯ ಪುತ್ರ ರಾಕಿ ಯಾದವ್ ಸೇರಿ ನಾಲ್ವರು ದೋಷಿ

Lingaraj Badiger
ಗಯಾ: ಕಾರು ಓವರ್​ಟೇಕ್ ಮಾಡಿದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಯುನಿಂದ ಅಮಾನತುಗೊಂಡ ಎಂಎಲ್ ಸಿ ಮನೋರಮಾ ದೇವಿ ಪುತ್ರ ರಾಕಿ ಯಾದವ್ ಹಾಗೂ ಇತರೆ ಮೂವರು ತಪ್ಪಿತಸ್ಥರು ಎಂದು ಗುರುವಾರ ಗಯಾ ಜಿಲ್ಲಾ ಕೋರ್ಟ್ ತೀರ್ಪು ನೀಡಿದೆ.
ಕಳೆದ ವರ್ಷ ಮೇ 7ರಂದು ಕಾರು ಓವರ್ ಟೇಕ್ ಮಾಡಿದ ಪಿಯುಸಿ ವಿದ್ಯಾರ್ಥಿ ಅದಿತ್ಯ ಸಚ್ ದೇವ್ ಅವರು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ನಾಲ್ವರು ಆರೋಪಿಗಳು ತಪ್ಪಿತಸ್ಥರು ಎಂದು ಇಂದು ತೀರ್ಪು ನೀಡಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಸೆಪ್ಟೆಂಬರ್ 6ಕ್ಕೆ ಕಾಯ್ದಿರಿಸಿದೆ.
ವ್ಯಾಪಾರಿಯೊಬ್ಬರ ಪುತ್ರ ಆದಿತ್ಯ ಸಚ್​ದೇವ್ ಹಾಗೂ ಸ್ನೆಹಿತರನ್ನು ಒಳಗೊಂಡ ಸ್ವಿಪ್ಟ್ ಕಾರು ಶಾಸಕಿಯ ಪುತ್ರ ರಾಕಿಯ ಎಸ್​ಯುವಿ ಕಾರನ್ನು ಓವರ್ ಟೇಕ್ ಮಾಡಿದ ಹಿನ್ನೆಲೆಯಲ್ಲಿ ಉಭಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಆವೇಶಕ್ಕೆ ಒಳಗಾದ ರಾಕಿ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಆದಿತ್ಯಾಗೆ ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಸಂಬಂಧ ಮೇ 11, 2016ರಲ್ಲಿ ರಾಕಿ ಯಾದವ್ ಅವರನ್ನು ಪೊಲೀಸರು ಬಂಧಿಸಿದ್ದರು.
ವಿಚಾರಣೆ ವೇಳೆ ರಾಕಿ ಯಾದವ್ ದ್ವಿತೀಯ ಪಿಯುಸಿ ವಿದ್ಯಾರ್ಥಿಯನ್ನು ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಅಲ್ಲದೆ ವಿಧಿವಿಜ್ಞಾನ ವರದಿಯಲ್ಲಿ ರಾಕಿ ಯಾದವ್ ಗನ್​ನಿಂದ ಹಾರಿದ ಬುಲೆಟ್​ನಿಂದ ಆದಿತ್ಯ ಸಚ್​ದೇವ್ ಸಾವು ಸಂಭವಿಸಿದೆ ಎಂಬುದು ಬಹಿರಂಗಗೊಂಡಿತ್ತು.
SCROLL FOR NEXT