ದೇಶ

ರಾಜ್ ಕೋಟ್ ನಲ್ಲಿ ಕಾಂಗ್ರೆಸ್ ಗೆ ಭಾರಿ ಹಿನ್ನಡೆ: ಐಟಿ ಸೆಲ್ ಸದಸ್ಯರ ಸಾಮೂಹಿಕ ರಾಜೀನಾಮೆ

Srinivas Rao BV
ರಾಜ್ ಕೋಟ್: ಚುನಾವಣೆಗೆ ಸಜ್ಜುಗೊಂಡಿರುವ ಗುಜರಾತ್ ನ ರಾಜ್ ಕೋಟ್ ನಲ್ಲಿ ಕಾಂಗ್ರೆಸ್ ಗೆ ತೀವ್ರ ಹಿನ್ನಡೆಯುಂಟಾಗಿದ್ದು, ಐಟಿ ಸೆಲ್ ನ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. 
ಐಟಿ ಸೆಲ್ ನ ಅಧ್ಯಕ್ಷ ರೋಹನ್ ಗುಪ್ತ ಅವರಿಗೆ ರಾಜೀನಾಮೆ ಪತ್ರಗಳನ್ನು ರವಾನೆ ಮಾಡಿದ್ದು, ತಮ್ಮನ್ನು ರಾಜ್ ಕೋಟ್ ಕಾಂಗ್ರೆಸ್ ನಿರ್ಲಕ್ಷಿಸುತ್ತಿದೆ. ಯಾವುದಾದರೂ ಸಲಹೆಯನ್ನು ನೀಡಿದರೂ ಅದನ್ನೂ ನಿರ್ಲಕ್ಷಿಸಲಾಗುತ್ತಿದೆ. ಐಟಿ ಸದಸ್ಯರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದು ತಮ್ಮ ಕೈಯಿಂದಲೇ ಹಣ ಹಾಕುತ್ತಿದ್ದಾರೆ. ಅಷ್ಟಾದರೂ ಸಹ ಯಾವುದೇ ಕಾರ್ಯತಂತ್ರಗಳನ್ನು ಹೆಣೆಯಬೇಕಾದರೂ ಐಟಿ ಸೆಲ್ ನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಐಟಿ ಸೆಲ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಎಲ್ಲಾ 28 ಪದಾಧಿಕಾರಿಗಳೂ ರಾಜೀನಾಮೆ ನೀಡಿದ್ದು 216 ಸದಸ್ಯರೂ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿಸಲಾಗಿದೆ. 
SCROLL FOR NEXT