ದೇಶ

ಕಾಂಗ್ರೆಸ್ ಅಧ್ಯಕ್ಷ ಚುನಾವಣೆ: ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ

Srinivas Rao BV
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಡಿ.04 ರಂದು ನಾಮಪತ್ರ ಸಲ್ಲಿಸಿದ್ದಾರೆ. 
ನವದೆಹಲಿಯಲ್ಲಿರುವ ಕಾಂಗ್ರೆಸ್ ನ ಕೇಂದ್ರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ನ 6 ಮುಖ್ಯಮಂತ್ರಿಗಳು ಸೂಚಕರಾಗಿ ಸಹಿ ಹಾಕಿದ್ದಾರೆ. ಕಾಂಗ್ರೆಸ್ ನ ರಾಜ್ಯ ಅಧ್ಯಕ್ಷರುಗಳು, ಪದಾಧಿಕಾರಿಗಳು ಕಾಂಗ್ರೆಸ್ ಕೇಂದ್ರ ಕಚೇರಿಗೆ ತೆರಳಲಿದ್ದು ರಾಹುಲ್ ಗಾಂಧಿಗೆ ಬೆಂಬಲ ಸೂಚಿಸಿದ್ದಾರೆ. ನಾಮಪತ್ರ ಅನುಮೋದಕರಾಗಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸಹಿ ಹಾಕಿದ್ದಾರೆ. 
ನಾಮ ಪತ್ರ ಸಲ್ಲಿಸುವುದಕ್ಕೂ ಮುನ್ನ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಡಾ. ಮನಮೋಹನ್ ಸಿಂಗ್ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ನ ಅಧ್ಯಕ್ಷ ಚುನಾವಣೆಗೆ ನಾಮ ಪತ್ರ ಸಲ್ಲಿಸಲು ಸಂಜೆ ನಾಲ್ಕು ಗಂಟೆ ವರೆಗೆ ಅವಕಾಶ ಇದೆ. 
ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಸ್ವಪಕ್ಷೀಯ ನಾಯಕನೇ ಟೀಕಿಸಿದ್ದು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ನಿಜವಾದ ಚುನಾವಣೆಯಲ್ಲ ಅದೊಂದು ಸೆಲೆಕ್ಷನ್ ಪ್ರಕ್ರಿಯೆ ಎಂದು ಮಹಾರಾಷ್ಟ್ರದ ಕಾಂಗ್ರೆಸ್ ಕಾರ್ಯದರ್ಶಿ ಶೆಹಜಾದ್ ಪೂನಾವಾಲ ಅಧ್ಯಕ್ಷ ಚುನಾವಣೆ ಕುರಿತು ಅತೃಪ್ತಿ ಹೊರಹಾಕಿದ್ದಾರೆ. ಚುನಾವಣೆಗೆ ಮತ ಚಲಾಯಿಸಲು ಹೋಗುತ್ತಿರುವವರು ಈ ಮೊದಲೇ ಫಿಕ್ಸ್ ಆಗಿದ್ದಾರೆ. ಇದೊಂದು ಪೂರ್ವನಿಯೋಜಿತ ಚುನಾವಣೆಯಾಗಿದೆ ಎಂದು ಶೆಹಜಾದ್ ಪೂನಾವಾಲ ಆರೋಪ ಮಾಡಿದ್ದಾರೆ.  
SCROLL FOR NEXT