ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ "ಬಾಬರ್ ಭಕ್ತ' ಮತ್ತು 'ಖಿಲ್ಜಿ ವಂಶದವರು' ಎಂದು ಬಿಜೆಪಿ ಮುಖಂಡ ಲೇವಡಿ ಮಾಡಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುತ್ತಿರುವ ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಮತ್ತು ಸಯ್ಯದ್ ಅಬ್ದುಲ್ ಖಾದಿರ್ ಜಿಲನಿ ಸೇರಿದಂತೆ ರಾಹುಲ್ ಗಾಂಧಿ ಅವರನ್ನು ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಕಟುವಾಗಿ ಟೀಕಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುತ್ತಿರುವವರ ಸಾಲಿಗೆ ರಾಹುಲ್ ಗಾಂಧಿ ಸಹ ಸೇರಿಕೊಂಡಿದ್ದಾರೆ. ರಾಮ ಮಂದಿರವನ್ನು ಬಾಬರ್ ಮತ್ತು ಸೋಮನಾಥ ಮಂದಿರವನ್ನು ಖಿಲ್ಜಿ ಧ್ವಂಸ ಮಾಡಿದ, ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರೂ ಸಾಮ್ರಾಜ್ಯವು ಇಸ್ಲಾಮಿಕ್ ದಾಳಿಕೋರರನ್ನು ಹೊಂದಿದೆ ಎಂದು ನರಸಿಂಹ ರಾವ್ ಟ್ವೀಟ್ ಮಾಡಿದ್ದಾರೆ.
ನಿನ್ನೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಮ ಜನ್ಮಭೂಮಿ-ಬಾಬರ್ ಮಸೀದಿ ವಿವಾದದ ಕುರಿತು ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದರು.