ಸಂಗ್ರಹ ಚಿತ್ರ 
ದೇಶ

ಅನೈತಿಕ ಸಂಬಂಧ ಪ್ರಕರಣಗಳಲ್ಲಿ ಪುರುಷರಿಗೆ ಮಾತ್ರ ಏಕೆ ಶಿಕ್ಷೆ?: ಸುಪ್ರೀಂ ಕೋರ್ಟ್ ಪ್ರಶ್ನೆ

ಅನೈತಿಕ ಸಂಬಂಧ ಅಥವಾ ವ್ಯಭಿಚಾರ ಪ್ರಕರಣದಲ್ಲಿ ಪರ ಹೆಂಗಸಿನೊಂದಿಗೆ ಸರವಾಡಿದ ಗಂಡಸನನ್ನೇ ಏಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ನವದೆಹಲಿ: ಅನೈತಿಕ ಸಂಬಂಧ ಅಥವಾ ವ್ಯಭಿಚಾರ ಪ್ರಕರಣದಲ್ಲಿ ಪರ ಹೆಂಗಸಿನೊಂದಿಗೆ ಸರವಾಡಿದ ಗಂಡಸನನ್ನೇ ಏಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಐಪಿಸಿ ಸೆಕ್ಷನ್ 497ನ್ನು ಪ್ರಶ್ನಿಸಿ ದಾಖಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಅನೈತಿಕ ಸಂಬಂಧ ಪ್ರಕರಣಗಳಲ್ಲಿ ಪರಸ್ಪರ ಒಪ್ಪಿಗೆ ನೀಡಿ ಲೈಂಗಿಕ ಕ್ರಿಯೆ  ನಡೆಸಿದ ಹೆಂಗಸು ಕೂಡ ಅಪರಾಧಿಯಲ್ಲವೆ? ಆಕೆಯನ್ನೇಕೆ ಶಿಕ್ಷಿಸಬಾರದು? ಎಂದು ಕೇಳಿ ಇದಕ್ಕೆ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಅನೈತಿಕ ಸಂಬಂಧ ಮಾಡಿದ ಗಂಡಸನ್ನು ಮಾತ್ರ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ಭಾರತೀಯ ದಂಡ ಸಂಹಿತೆಯ 497 ಸೆಕ್ಷನ್ ನಲ್ಲಿನ ನಿಯಮವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಈ ನಿಯಮ ಮಹಿಳಾ  ಪರವಾಗಿದೆ. ತಪ್ಪು ಮಾಡಿದ ಹೆಂಗಸರನ್ನು ಆರೋಪದಿಂದ ತಪ್ಪಿಸಿಕೊಳ್ಳುವಂತೆ ಮಾಡುತ್ತದೆ. ಗಂಡಸರಿಗೆ ಇದರಿಂದ ಅನ್ಯಾಯವಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಜೋಸೆಫ್ ಶೈನ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿತಾರಣೆ ನಡೆಸಿದ ನ್ಯಾಯಾಲಯ ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ತಪ್ಪಿತಸ್ಥ ಪುರಷನನ್ನು ಮಾತ್ರ ಶಿಕ್ಷೆಗೊಳಪಡಿಸಲಾಗುತ್ತದೆ. ಅದೇ ಪ್ರಕರಣದಲ್ಲಿ ಭಾಗಿಯಾದ  ಮಹಿಳೆ ಶಿಕ್ಷೆಗೊಳಪಡುವುದಿಲ್ಲ. ಇದು ದುರ್ಬಳಕೆಗೆ ಕಾರಣವಾಗಿದೆ. ಸಂವಿಧಾನ ಯಾವಾಗಲೂ ತಟಸ್ಥವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಹಿಂದೆ ಡಿಸೆಂಬರ್ 3ರಂದು ನಡೆದಿದ್ದ ವಿಚಾರಣೆ ವೇಳೆ ಇಂತಹುದೇ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್, ವಿವಾಹಿತ ಮಹಿಳೆಯ ಅನುಮತಿ ಮೇರೆಗೆ ಆಕೆಯೊಂದಿಗೆ ಲೈಂಗಿಕ ಕ್ರಿಯ ನಡೆಸಿದ ಪುರುಷನದ್ದು ತಪ್ಪು ಎಂದಾದರೇ  ಪುರುಷನ ಅನುಮತಿ ಇಲ್ಲದೇ ಪರಪುರುಷನೊಂದಿಗೆ ಮಲಗುವುದೂ ಕೂಡ ಅಪರಾಧ. ಹೀಗಾಗಿ ಅವರ ಹೆಸರೇಕೆ ಬಹಿರಂಗ ಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT