ಸಂಗ್ರಹ ಚಿತ್ರ 
ದೇಶ

ದೇಶಾದ್ಯಂತ ಮದ್ಯ ನಿಷೇಧ ಮಾಡಿ: ಬಿಹಾರ ಸಿಎಂ ನಿತೀಶ್ ಕುಮಾರ್

ಬಿಹಾರ ಮತ್ತು ಗುಜರಾತ್ ಮಾತ್ರವಲ್ಲದೇ ದೇಶಾದ್ಯಂತ ಮದ್ಯಪಾನ ನಿಷೇಧ ಮಾಡಬೇಕು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಆಗ್ರಹಿಸಿದ್ದಾರೆ.

ಪಾಟ್ನಾ: ಬಿಹಾರ ಮತ್ತು ಗುಜರಾತ್ ಮಾತ್ರವಲ್ಲದೇ ದೇಶಾದ್ಯಂತ ಮದ್ಯಪಾನ ನಿಷೇಧ ಮಾಡಬೇಕು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಆಗ್ರಹಿಸಿದ್ದಾರೆ.
ಮದ್ಯಪಾನ ನಿಷೇಧದಿಂದ ಕೋಮು ಸೌಹಾರ್ಧ ಸಾಧ್ಯ ಎಂದು ಹೇಳಿರುವ ನಿತೀಶ್ ಕುಮಾರ್, ಮದ್ಯಪಾನವನ್ನು ಹಿಂದೂ, ಮುಸ್ಲಿಂ, ಸಿಖ್, ಜೈನ ಧರ್ಮಗಳು ವಿರೋಧಿಸುತ್ತವೆ. ಮದ್ಯಪಾನ ನಿಷೇಧದ ಮೂಲಕ ಎಲ್ಲರೂ ಎಲ್ಲ  ಧರ್ಮಗಳನ್ನು ಗೌರವಿಸುತ್ತಾರೆ ಎಂದು ನಿತೀಶ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ದೇಶಾದ್ಯಂತ ಮದ್ಯಪಾನ ನಿಷೇಧಕ್ಕಾಗಿ ಜಾಗೃತಿ ಅಭಿಯಾನ ನಡೆಸುವಂತೆ ನಿತೀಶ್ ಕುಮಾರ್ ಕರೆ ನೀಡಿದ್ದಾರೆ. 
ಮದ್ಯಪಾನ ನಿಷೇಧ ಸಂಬಂಧ ರಾಜಕೀಯ ಪಕ್ಷಗಳ ಮೌನವೇಕೆ?
ಇದೇ ವೇಳೆ ದೇಶಾದ್ಯಂತ ಮದ್ಯಪಾನ ನಿಷೇಧಿಸುವಂತೆ ಸಂಬಂಧ ಜನ ಸಕಾರಾತ್ಮಕವಾಗಿದ್ದರೂ, ರಾಜಕೀಯ ಪಕ್ಷಗಳೇಕೆ ಮೌನಕ್ಕೆ ಶರಣಾಗಿವೆ ಎನ್ನುವ ಮೂಲಕ ನಿತೀಶ್ ಕುಮಾರ್ ವಿಪಕ್ಷಗಳ ಕಾಲೆಳೆದಿದ್ದಾರೆ. ಅಲ್ಲದೆ  ಕಾಂಗ್ರೆಸ್ ಮತ್ತು ಇತರೆ ಎಡಪಕ್ಷಗಳು ಮದ್ಯಪಾನ ನಿಷೇಧಕ್ಕೆ ಬೆಂಬಲ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಗುಜರಾತ್ ನಲ್ಲಿ ಮದ್ಯಪಾನ ನಿಷೇಧವಾದರೆ ಬಿಹಾರದಲ್ಲೂ ಅದರ ನಿಷೇಧ ಸಾಧ್ಯ ಎಂಬುದನ್ನು ನಾವು ತೋರಿಸಿದ್ದೇವೆ.  ಬಿಹಾರ ಮತ್ತು ಗುಜರಾತ್ ನಲ್ಲಿ ಸಾಧ್ಯವಾಗಿದ್ದು, ದೇಶದ ಇತರೆ ರಾಜ್ಯಗಳಲ್ಲಿ ಸಾಧ್ಯವಾಗುವುದಿಲ್ಲವೇ ಎಂದು ನಿತೀಶ್ ಪ್ರಶ್ನಿಸಿದ್ದಾರೆ.
ಇದೇ ವೇಳೆ ಬಿಹಾರದಲ್ಲಿ 2016ರಿಂದ ಮದ್ಯಪಾನ ನಿಷೇಧ ಮಾಡಿದ ಬಳಿಕ ರಾಜ್ಯದಲ್ಲಿ ಅಪರಾಧ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ ಎಂದು ಹೇಳಿರುವ ನಿತೀಶ್ ಕುಮಾರ್ ಅವರು, ಮದ್ಯಪಾನ ನಿಷೇಧದಿಂದ ರಸ್ತೆ ಅಪಘಾತ  ಪ್ರಕರಣ, ಕೌಟುಂಬಿಕ ಹಿಂಸಾಚಾರ, ಇತರೆ ಮಾರಕ ಕಾಯಿಲೆಗಳ ನಿಯಂತ್ರಣ ಕೂಡ ಆಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!