ಬರೇಲಿ(ಉತ್ತರಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಭಾಗವಹಿಸಿದ್ದಕ್ಕೆ ಗಂಡ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಮಹಿಳೆಯೊಬ್ಬಳು ದೂರಿದ್ದಾಳೆ.
ಉತ್ತರಪ್ರದೇಶದ ಬರೇಲಿಯಲ್ಲಿ ಪತಿರಾಯ ತ್ರಿವಳಿ ತಲಾಖ್ ನೀಡಿದ್ದು ಪತ್ನಿಗೆ ಅನೈತಿಕ ಸಂಬಂಧವಿರುವುದೇ ತಲಾಖ್ ನೀಡಿರುವುದಕ್ಕೆ ಕಾರಣ ಎಂದು ಗಂಡ ಹೇಳಿಕೊಂಡಿದ್ದಾನೆ.
ಇದಕ್ಕೆ ಪತ್ನಿ ಗಂಡನಿಗೆ ತನ್ನ ಚಿಕ್ಕಮ್ಮನ ಜತೆ ಅನೈತಿಕ ಸಂಬಂಧವಿದ್ದು ಡೈವೋರ್ಸ್ ನೀಡುವುದಾಗಿ ಹೇಳುತ್ತಿದ್ದ ಎಂದು ಮಹಿಳೆ ದೂರಿದ್ದಾಳೆ.
ಮಾಜಿ ಕೇಂದ್ರ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ಅವರ ಸಹೋದರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಫಹಾತ್ ನಖ್ವಿ ಈ ಮಹಿಳೆಯ ನೆರವಿಗೆ ಧಾವಿಸಿದ ಬಳಿಕ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.