ಆಸ್ಟ್ರೇಲಿಯಾ: ಭಾರತೀಯ ಮೂಲದ ಫುಟ್ಬಾಲ್ ಆಟಗಾರ್ತಿ ಸಮುದ್ರದಲ್ಲಿ ಮುಳುಗಿ ಸಾವು
ನವದೆಹಲಿ: ಭಾರತೀಯ ಮೂಲದ ಫುಟ್ ಬಾಲ್ ಆಟಗಾರ್ತಿ ಆಸ್ಟ್ರೇಲಿಯಾದ ಗ್ಲೆನೆಲ್ಗ್ ಬೀಚ್ ನಲ್ಲಿ ಮುಳುಗಿ ಮೃತರಾಗಿದ್ದಾರೆ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ ಜಿ ಎಫ್ ಐ) ಈ ಮಾಹಿತಿಯನ್ನು ಸ್ಪಷ್ಟಪಡಿಸಿದೆ
ಕ್ರೀಡಾಕೂಟ ಮುಗಿದ ನಂತರ ಕಡಲತೀರಕ್ಕೆ ತೆರಳಿದ್ದಾಗ ಎದ್ದ ಭಾರಿ ಅಲೆಗಳ ಹೊಡೆತಕ್ಕೆ ಐವರು ಭಾರತೀಯ ಫುಟ್ಬಾಲ್ ಆಟಗಾರರು ಸಿಲುಕಿದ್ದರು. ಅದರಲ್ಲಿ ಈ ಯುವತಿ ಸಹ ಒಬ್ಬರಾಗಿದ್ದರು.ಮೃತ ಯುವತಿಯನ್ನು ನಿತಿಶಾ ನೇಗಿ ಎಂದು ಗುರುತಿಸಲಾಗಿದೆ.
ಎರಡು ಒಲಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ನೇತೃತ್ವದ ಎಸ್ ಜಿ ಎಫ್ ಐ ಹಾಕಿ, ಫುಟ್ಬಾಲ್ ಮತ್ತು ಸಾಫ್ಟ್ ಬಾಲ್ ಸೇರಿದಂತೆ ಆರು ವಿಭಾಗಗಳಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದಿತ್ತು. ಬೇರೆಲ್ಲಾ ತಂಡಗಳೊಡನೆ ಈ ಫುಟ್ಬಾಲ್ ತಂಡವೂ ಆಸ್ಟ್ರೇಲಿಯಾಗೆ ತೆರಳಿತ್ತು.
ಕಡಲತೀರದ ಬಂಡೆಯೊಂದರ ಬಳಿ ಅವಳ ಮೃತದೇಹ ಪತ್ತೆಯಾಗಿದೆ. ಈ ಘಟನೆ ಕುರಿತಂತೆ ತನಿಖೆ ನಡೆಸಲು ಕ್ರೀಡಾ ಸಚಿವರು ಆದೇಶ ನೀಡಿದ್ದಾರೆ