ದೇಶ

ಗುಜರಾತ್ ಚುನಾವಣೆ: ಸಮುದ್ರ ವಿಮಾನದಲ್ಲಿ ಪ್ರಧಾನಿ ಮೋದಿ ಐತಿಹಾಸಿಕ ಹಾರಾಟ

Srinivasamurthy VN
ಅಹ್ಮದಾಬಾದ್: ಗುಜರಾತ್ ಚುನಾವಣೆಯ ಪ್ರಚಾರದ ಅಂತಿಮ ದಿನವಾದ ಮಂಗಳವಾರ ಪ್ರಧಾನಿ ಮೋದಿ ಐತಿಹಾಸಿಕ ಕ್ಷಣವೊಂದಕ್ಕೆ ಸಾಕ್ಷಿಯಾದರು.
ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿ ಅವರ ರೋಡ್ ಶೋ ಗೆ ಆಯೋಗ ನಿರಾಕರಿಸಿದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಸಮುದ್ರ ವಿಮಾನದ ಮೂಲಕ ಧರೋಯ್ ಡ್ಯಾಂಗೆ ಪ್ರಯಾಣ ಬೆಳೆಸಿದರು. ಆ ಮೂಲಕ ಭಾರತದಲ್ಲಿ  ಮೊದಲ ಬಾರಿಗೆ ಸಮುದ್ರ ವಿಮಾನದಲ್ಲಿ ಪ್ರಯಾಣ ಮಾಡಿದ ಮೊದಲ ಪ್ರಯಾಣಿಕ ಹಾಗೂ ಮೊದಲ ಪ್ರಧಾನಿ ಎಂಬ ಕೀರ್ತಿಗೂ ನರೇಂದ್ರ ಮೋದಿ ಭಾಜನರಾದರು.
ಇಂದು ಬೆಳಗ್ಗೆ ಸಬರಮತಿ ನದಿಯಲ್ಲಿ ಅಹ್ಮದಾಬಾದ್ ನಿಂದ ಧರೋಯ್ ಡ್ಯಾಂಗೆ ಪ್ರಧಾನಿ ಮೋದಿ ಸಮುದ್ರ ವಿಮಾನದ ಮೂಲಕ ಹಾರಾಟ ನಡೆಸಿದರು. 
ಈ ವೇಳೆ ಮಾತನಾಡಿದ ಗುಜರಾತ್ ಸಿಎಂ ವಿಜಯ್ ರುಪಾನಿ ಅವರು, ದೇಶದಲ್ಲಿ ಮೊದಲ ಬಾರಿಗೆ ಸಮುದ್ರ ವಿಮಾನವೊಂದು ಹಾರಾಟ ನಡೆಸುತ್ತಿದ್ದು, ಅದರ ಮೊದಲ ಪ್ರಯಾಣಿಕರಾಗಿ ಪ್ರಧಾನಿ ನರೇಂದ್ರ ಮೋದಿ  ಸಂಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಗುಜರಾತ್ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಇಂದು ಪ್ರಚಾರದ ಅಂತಿಮ ದಿನವಾಗಿದ್ದು, ಪ್ರಧಾನಿ ಮೋದಿ ಹಲವು ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
SCROLL FOR NEXT