ಪರಸ್ಪರ ವಂದಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ 
ದೇಶ

ಸಂಸತ್ ದಾಳಿಗೆ 16 ವರ್ಷ: ಹುತಾತ್ಮರಿಗೆ ಶ್ರದ್ಧಾಂಜಲಿ ವೇಳೆ ಪ್ರಧಾನಿ ಮೋದಿ, ಮನಮೋಹನ್ ಸಿಂಗ್ ಮುಖಾಮುಖಿ!

ನಿನ್ನೆಯಷ್ಟೇ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿ ಸುದ್ದಿಯಾಗಿದ್ದ ಪ್ರಧಾನಿ ...

ನವದೆಹಲಿ: ನಿನ್ನೆಯಷ್ಟೇ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿ ಸುದ್ದಿಯಾಗಿದ್ದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಇಂದು ಪರಸ್ಪರ ಮುಖಾಮುಖಿಯಾದರು.
2001ರ ಸಂಸತ್ತು ದಾಳಿಯಲ್ಲಿ ತಮ್ಮ ಪ್ರಾಣ ಕಳೆದುಕೊಂಡ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದ ವೇಳೆ ಇಬ್ಬರೂ ನಾಯಕರು ಆತ್ಮೀಯವಾಗಿ ಪರಸ್ಪರ ವಂದಿಸಿಕೊಂಡಿದ್ದು ಅಲ್ಲಿ ಸೇರಿದ್ದವರ ಗಮನ ಸೆಳೆಯಿತು.
ಸಂಸತ್ತಿಗೆ ದಾಳಿ ನಡೆದು ಇಂದಿಗೆ 16 ವರ್ಷಗಳಾಗಿದ್ದು ಎಲ್ಲಾ ಪಕ್ಷಗಳ ನಾಯಕರು ಗೌರವ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
ಪ್ರಧಾನಿ ಮೋದಿಯವರು ಗುಜರಾತ್ ನ ರ್ಯಾಲಿಯಲ್ಲಿ ಮಾತನಾಡುವಾಗ, ಪಾಕಿಸ್ತಾನ ಅಧಿಕಾರಿಗಳು ಮತ್ತು ಮನಮೋಹನ್ ಸಿಂಗ್ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರನ್ನು ಅವರ ಮನೆಯಲ್ಲಿ ಕಳೆದ 6ರಂದು ರಾತ್ರಿಯ ಭೋಜನಕ್ಕೆ ಭೇಟಿಯಾಗಿದ್ದರು ಎಂದರು.
ಅದಾಗಿ ಮರುದಿನವೇ ಮಣಿಶಂಕರ್ ಅಯ್ಯರ್ ಪ್ರಧಾನಿಯವರನ್ನು ನೀಚ ಎಂದು ಕರೆದು ಪಕ್ಷದಿಂದ ಅಮಾನತುಗೊಂಡಿದ್ದರು.
ಪ್ರಧಾನಿಯವರ ಆರೋಪಕ್ಕೆ ನಿನ್ನೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಮನಮೋಹನ್ ಸಿಂಗ್, ಪ್ರಧಾನಿಯವರು ತಮ್ಮ ದುರಾಲೋಚನೆಯಿಂದ ಕಾನೂನಿನ ವ್ಯಾಪ್ತಿ ಮೀರಿ ಹಿಂದಿನ ನಿದರ್ಶನಗಳಂತೆ ಅಪಾಯಕಾರಿಯಾಗಿ ವರ್ತಿಸುತ್ತಿದ್ದು ದೇಶದ ಜನತೆಯ ಕ್ಷಮೆ ಕೋರಬೇಕೆಂದು ಒತ್ತಾಯಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT