ಮತಗಳ ವಿವಿಪ್ಯಾಟ್ ಪರಿಶೀಲನೆ ಕಾಂಗ್ರೆಸ್ ಪಕ್ಷದ ಬೇಡಿಕೆಗೆ ಸುಪ್ರೀಂ ನಕಾರ
ನವದೆಹಲಿ: ವಿವಿಪ್ಯಾಟ್ ದಾಖಲೆಯನ್ನು ಇವಿಎಂ ಓಟಿನೊಡನೆ ಪರಿಶೀಲಿಸಬೇಕು ಎಂಬ ಕಾಂಗ್ರೆಸ್ ಪಕ್ಷ ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಶೇ.25ರ ರಷ್ಟು ವಿವಿಪ್ಯಾಟ್ ಕಾಗದ ದಾಖಲೆಯನ್ನು ಇವಿಎಂ ಓಟ್‌ಗಳ ಜತೆಗೆ ಪರಿಶೀಲಿಸಿ ಮತ ಎಣಿಕೆ ಮಾಡುವಂತೆ ಚನಾವಣಾ ಆಯೋಗಕ್ಕೆ ನಿರ್ದೇಶ ನೀಡಬೇಕು ಎಂದು ಕೋರಿ ಕಾಂಗ್ರೆಸ್ ಪಕ್ಷ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿತ್ತು.
ಪಕ್ಷ ಸಲ್ಲಿಸಿದ್ದ ಮನವಿಯಲ್ಲಿ ಯಾವ ಹುರುಳಿಲ್ಲ ಎಂದ ನ್ಯಾಯಾಲಯವು ಗುಜರಾತ್ ಕಂಗ್ರೆಸ್ ಪಕ್ಷವು ಚುನಾವಣಾ ಸುಧಾರಣೆಗಾಗಿ ರಿಟ್ ಅರ್ಜಿ ಸಲ್ಲಿಸುವ ಮೂಲಕ ನ್ಯಾಯಾಲಕ್ಕೆ ಬನ್ನಿ ಎಂದು ಹೇಳಿದೆ.
ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸುವುದು ಅಪಾಯ, ಇವಿಎಂಗಳನ್ನು ತಿರುಚಲಾಗುತ್ತಿದೆ. ಇವಿಎಂ ಗೆ ಬ್ಲೂ ಟೂತ್ ಉಪಕರಣವನ್ನು ಅಳವಡಿಸಲಾಗುತ್ತದೆ ಎಂದು ಕಾಂಗ್ರೆಸ್ ತನ್ನ ಕಳವಳ ವ್ಯಕ್ತಪಡಿಸಿತ್ತು. ಆದರೆ ಕಾಂಗ್ರೆಸ್ ನ ಆರೋಪವನ್ನು ತಿರಸ್ಕರಿಸಿದ ಬಿಜೆಪಿ 'ಚುನಾವಣೆಯಲ್ಲಿ ಸೋಲುತ್ತೇನೆನ್ನುವ ಭಯಕ್ಕೆ ಕಾಂಗ್ರೆಸ್ ಈ ಹೊಸ ನೆಪ ಹುಡುಕಿದೆ' ಎಂದು ಟೀಕಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics