ವಡ್ಗಮ್(ಗುಜರಾತ್): ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳೆಲ್ಲಾ ಅಸಂಬದ್ಧ ಎಂದು ದಲಿತ ಮುಖಂಡ ಜಿಘ್ನೇಶ್ ಮೇವಾನಿ ಹೇಳಿದ್ದಾರೆ.
ವಡ್ಗಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಜಿಘ್ನೇಶ್ ಮೇವಾನಿ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂಬ ಚುನಾವಣೋತ್ತರ ಸಮೀಕ್ಷೆಗಳು ನಕಲಿ ಮತ್ತು ಕಳಪೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಸೋತು ಸುಣ್ಣವಾಗಲಿದೆ ಎಂದು ಹೇಳಿದ್ದಾರೆ.
ಗುಜರಾತ್ ವಿಧಾಸನಭೆಯ ಎರಡನೇ ಹಂತದ ಮತದಾನ ಡಿಸೆಂಬರ್ 14ರಂದು ನಡೆದಿದ್ದು ನಂತರ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಬಹುಮತ ಸಾಧಿಸಲಿವೆ ಎಂದು ಹೇಳಿದ್ದವು.
ಹಲವು ಮಾಧ್ಯಮಗಳು ನೀಡಿದ ಚುನಾವಣೋತ್ತರ ಸಮೀಕ್ಷೆಗಳಲ್ಲಿ 182 ಸೀಟುಗಳಲ್ಲಿ ಪೈಕಿ ಬಿಜೆಪಿ 100 ಗಡಿ ದಾಟಲಿದೆ ಎಂದು ಹೇಳಿದ್ದವು. ಇನ್ನು ಡಿಸೆಂಬರ್ 18ರಂದು ಎಣಿಕೆ ಕಾರ್ಯ ನಡೆಯಲಿದ್ದು ಸಮೀಕ್ಷೆಗಳ ಸತ್ಯಾಸತ್ಯತೆ ತಿಳಿಯಲಿದೆ.