ನವದೆಹಲಿ: ಕೇರಳದಲ್ಲಿ ರಾಜಕೀಯ ಸಂಘಟನೆಗಳ ಸೈದ್ಧಾಂತಿಕ ಸಮರ ಮುಂದುವರೆದಿದ್ದು, ಸಿಪಿಎಂ ಪಕ್ಷದ ಪೋಸ್ಟರ್ ನಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಅವರ ಭಾವಚಿತ್ರ ಇರುವುದು ಈಗ ವಿವಾದಕ್ಕೀಡಾಗಿದ್ದು, ಬಿಜೆಪಿ ಎಡಪಂಥೀಯ ಸಂಘಟನೆ ವಿರುದ್ಧ ವಾಗ್ದಾಳಿ ನಡೆಸಿದೆ.
ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕಿಮ್ ಜಾಂಗ್ ಇರುವ ಪೋಸ್ಟರ್ ನ್ನು ಟ್ವೀಟ್ ಮಾಡಿದ್ದು, " ಸಿಪಿಎಂ(ಐ) ಸಂಘಟನೆ ಕೇರಳವನ್ನು ತಮ್ಮ ಸೈದ್ಧಾಂತಿಕ ವಿರೋಧಿಗಳ ಹತ್ಯೆ ಮಾಡುವ ಪ್ರದೇಶವನ್ನಾಗಿರಿಸಿರುವುದು ಅಚ್ಚರಿಯ ವಿಷಯವೇನಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಸಿಪಿಎಂ(ಐ) ಬಿಜೆಪಿ ಕಚೇರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸುವುದಿಲ್ಲ ಎಂದು ನಂಬಿದ್ದೇನೆ ಎಂದು ಸಂಬಿತ್ ಪಾತ್ರ ವ್ಯಂಗ್ಯ ಧಾಟಿಯಲ್ಲಿ ಸಿಪಿಎಂ(ಐ) ನ್ನು ಟೀಕೆ ಮಾಡಿದ್ದಾರೆ. ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರ ಸರಣಿ ಹತ್ಯೆ ನಡೆಯುತ್ತಿದ್ದು, ಬಿಜೆಪಿಯನ್ನು ಸದೃಢಗೊಳಿಸಲು ಅ.3 ರಿಂದ ಬಿಜೆಪಿ ಜನರಕ್ಷಾ ಯಾತ್ರೆ ನಡೆಸಿತ್ತು.