ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ರೇಖೆಯಲ್ಲಿನ ಗುರೇಜ್ ಮತ್ತು ನೌಗಾಂವ್ ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಐವರು ಭಾರತೀಯ ಯೋಧರ ಪೈಕಿ ಮೂವರ ಮೃತ ದೇಹಗಳನ್ನು ಶೋಧ ಮತ್ತು ರಕ್ಷಣಾ ತಂಡ ಪತ್ತೆ ಹಚ್ಚಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ನೌಗಾಂವ್ ನಲ್ಲಿ ಓರ್ವ ಯೋಧನ ಮೃತದೇಹ ಹಾಗೂ ಗುರೇಜ್ ನಲ್ಲಿ ಇಬ್ಬರು ಯೋಧರ ಮೃತ ದೇಹಗಳು ಪತ್ತೆಯಾಗಿವೆ ಎಂದು ಸೇನಾ ಮೂಲಗಳು ತಿಳಿಸಿವೆ.
ಹಿಮಪಾತದಲ್ಲಿ ಐವರು ಯೋಧರು ನಾಪತ್ತೆಯಾಗಿದ್ದು ಇತರ ಇಬ್ಬರು ಯೋಧರ ಮೃತ ದೇಹಗಳ ಶೋಧ ಕಾರ್ಯ ಈಗಲೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿಗಾಲ ಋತುವಿನ ಮೊದಲ ಹಿಮಪಾತವಾಗಿದ್ದು, ಹಿಮಪಾತವಾದ ಮೊದಲ ದಿನವೇ ಭಾರತೀಯ ಸೇನೆಯ ಯೋಧರು ನಾಪತ್ತೆಯಾಗಿದ್ದು ಶೋಧ ಕಾರ್ಯ ಭರದಿಂದ ಸಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics