ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಹಿಮಾಚಲ ಪ್ರದೇಶ ನೂತನ ಸಿಎಂ ಆಗಿ ಜೈರಾಮ್ ಠಾಕೂರ್ ಆಯ್ಕೆ ಸಾಧ್ಯತೆ!

ತೀವ್ರ ಕುತೂಹಲ ಕೆರಳಿಸಿರುವ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಸಿಎಂ ಅಭ್ಯರ್ಥಿ ಪಿಕೆ ಧುಮಾಲ್ ಚುನಾವಣೆಯಲ್ಲಿ ಸೋಲುಕಾಣುತ್ತಿದ್ದಂತೆಯೇ ಬಿಜೆಪಿಯ ಇತರೆ ಪ್ರಭಾವಿ ಶಾಸಕರಿಗೆ ಅದೃಷ್ಟ ಖುಲಾಯಿಸಿದಂತಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 19 Dec 2017, 10:18 am
ಶಿಮ್ಲಾ: ತೀವ್ರ ಕುತೂಹಲ ಕೆರಳಿಸಿರುವ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಸಿಎಂ ಅಭ್ಯರ್ಥಿ ಪಿಕೆ ಧುಮಾಲ್ ಚುನಾವಣೆಯಲ್ಲಿ ಸೋಲುಕಾಣುತ್ತಿದ್ದಂತೆಯೇ ಬಿಜೆಪಿಯ ಇತರೆ ಪ್ರಭಾವಿ ಶಾಸಕರಿಗೆ ಅದೃಷ್ಟ  ಖುಲಾಯಿಸಿದಂತಿದೆ.
ಹಿಮಾಚಲ ಪ್ರದೇಶ ಚುನಾವಣೆ ಬಳಿಕ ಹೊಸ ಸಿಎಂಗಾಗಿ ಬಿಜೆಪಿಯಲ್ಲಿ ಆಂತರಿಕ ಸರ್ಕಸ್ ಆರಂಭವಾಗಿದ್ದು, ಸಿಎಂ ರೇಸ್ ನಲ್ಲಿ ಸಾಕಷ್ಟು ಮಂದಿಯ ಹೆಸರು ಕೇಳಿಬರುತ್ತಿದೆ. ಆದರು ಪ್ರಮುಖವಾಗಿ ಸೆರಾಜ್ ಕ್ಷೇತ್ರದ ಶಾಸಕ  ಹಾಗೂ ಮಾಜಿ ಸಚಿವ ಜೈ ರಾಮ್ ಠಾಕೂರ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.
ಈ ಹಿಂದೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಜೈರಾಮ್ ಠಾಕೂರ್ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಹಾಲಿ ಚುನಾವಣೆಯಲ್ಲಿ  ಜೈರಾಮ್ ಠಾಕೂರ್ ಕಾಂಗ್ರೆಸ್ ಪಕ್ಷ ಚೇತ್ ರಾಮ್ ಅವರನ್ನು ಪರಾಭವಗೊಳಿಸಿದ್ದರು. 1998ರಲ್ಲಿ ಮೊದಲ ಬಾರಿಗೆ ಮಂಡಿ ಕ್ಷೇತ್ರದಿಂದ ಜೈರಾಮ್ ಠಾಕೂರ್ ಆಯ್ಕೆಯಾಗಿದ್ದರು.

Advertisement

Advertisement

ಪಕ್ಷ ನೀಡುವ ಯಾವುದೇ ರೀತಿಯ ಜವಾಬ್ಜಾರಿ ನಿಭಾಯಿಸಲು ಸಿದ್ಧ
ಇನ್ನು ತಾವು ಸಿಎಂ ರೇಸ್ ನಲ್ಲಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈರಾಮ್ ಠಾಕೂರ್, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಹೀಗಾಗಿ ಪಕ್ಷದ ಮುಖಂಡರು ಯಾವುದೇ ಜವಾಬ್ದಾರಿ ನೀಡಿದರು ನಾನು  ನಿಭಾಯಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಈ ಹಿಂದೆ ಬಿಜೆಪಿ ಪಕ್ಷದ ಸಿಎಂ ಅಭ್ಯರ್ಥಿಯಾಗಿದ್ದ ಪ್ರೇಮ್ ಕುಮಾರ್ ಧುಮಾಲ್ ಅವರು ಕಾಂಗ್ರೆಸ್ ಪಕ್ಷದ ರಾಜಿಂದರ್ ರಾಣಾ ವಿರುದ್ಧ ಹೀನಾಯವಾಗಿ ಸೋಲುಂಡಿದ್ದರು. ಪಿಕೆ ಧುಮಾಲ್ 18,559 ಮತಗಳಿಗೆ ಮಾಡಿದ್ದರೆ,  ರಾಣಾ 21,492 ಮತಗಳನ್ನು ಗಳಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments