ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಹೈಟೆಕ್ ವೀಸಾಗೆ ಅಮೆರಿಕಾ ಕಡಿವಾಣ, ಕೆನಡಾದತ್ತ ಭಾರತೀಯರು

ಅಮೆರಿಕ ವಿದೇಶಿಗರಿಗೆ ಹೈ-ಟೆಕ್ ವೀಸಾಗಳನ್ನು ನೀಡುವುದಕ್ಕೆ ಕಡಿವಾಣ ಹಾಕುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರು ಕೆನಡಾದತ್ತ ಮುಖ ಮಾಡಿದ್ದಾರೆ.

ವೀಸಾ
Srinivas Rao BV
Updated On : 20 Dec 2017, 4:50 am
ನವದೆಹಲಿ: ಅಮೆರಿಕ ವಿದೇಶಿಗರಿಗೆ ಹೈ-ಟೆಕ್ ವೀಸಾಗಳನ್ನು ನೀಡುವುದಕ್ಕೆ ಕಡಿವಾಣ ಹಾಕುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರು ಕೆನಡಾದತ್ತ ಮುಖ ಮಾಡಿದ್ದಾರೆ. ಡಾಟಾ ಪ್ರೊಸೆಸಿಂಗ್ ಸಂಸ್ಥೆಯಾದ ಥಿಂಕ್ ಡಾಟಾ ವರ್ಕ್ಸ್ ಇನ್ಕ್ ಕೆನಡಾದ ಹೊಸ ಫಾಸ್ಟ್-ಟ್ರಾಕ್ ವೀಸಾ ಪ್ರೋಗ್ರಾಮ್ ಮೂಲಕ ಬ್ರೆಜಿಲ್ ನಿಂದ ಸಾಫ್ಟ್ ವೇರ್ ಇಂಜಿನಿಯರ್ ಗಳನ್ನು ನೇಮಕ ಮಾಡಿಕೊಂಡಿದೆ.   
ಕೆನಡಾದ ಹೊಸ ಫಾಸ್ಟ್-ಟ್ರಾಕ್ ವೀಸಾ ಪ್ರೋಗ್ರಾಮ್ ಮೂಲಕ, ಅರ್ಜಿಯ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ನಿಗದಿಪಡಿಸಿರುವ 10 ದಿನಗಳ ಅವಧಿಯ ಗುರಿಗಿಂತಲೂ ಕಡಿಮೆ ಅವಧಿಯಲ್ಲಿ ಪೂರ್ಣಗೊಳ್ಳುತ್ತದೆ. ಫಾಸ್ಟ್-ಟ್ರಾಕ್ ವೀಸಾ ಪ್ರೋಗ್ರಾಂ ಗಿಂತಲೂ ಮುನ್ನ ವೀಸಾ ಅರ್ಜಿಯ ಪ್ರಕ್ರಿಯೆ ಪೂರ್ಣಗೊಳ್ಳಲು ಹಲವು ತಿಂಗಳುಗಳೇ ಬೇಕಾಗಿತ್ತು ಎನ್ನುತ್ತಾರೆ ಟೋರೊಂಟೋ ಮೂಲದ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.
ವಲಸಿಗರನ್ನು ಅಮೆರಿಕ ಪ್ರವೇಶಿಸುವುದರಿಂದ ನಿರ್ಬಂಧ ವಿಧಿಸುವುದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೈಟೆಕ್ ವೀಸಾಗಳಿಗೆ ಕಡಿವಾಣ ಹಾಕಿದ್ದರು. ಆದರೆ ಕೆನಡಾದ ಪ್ರಧಾನಿಯ ನೇತೃತ್ವದ ಸರ್ಕಾರದ ಗ್ಲೋಬಲ್ ಸ್ಕಿಲ್ಸ್ ಸ್ಟ್ರಾಟಜಿ ಗಮನ ಸೆಳೆಯುತ್ತಿದ್ದು, ಕೆನಡಾದ ಫಾಸ್ಟ್-ಟ್ರಾಕ್ ವೀಸಾ ಯೋಜನೆ ಪ್ರಾರಂಭವಾದಾಗಿನಿಂದ ಬ್ರೆಜಿಲ್ ನವರೂ ಸೇರಿದಂತೆ 2,000 ನೌಕರರು ಕೆನಡಾ ತಲುಪಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement