ಪತ್ರಿಕೋದ್ಯಮ ಕ್ಷೇತ್ರದ 27 ಸಾಧಕರಿಗೆ ರಾಮನಾಥ ಗೋಯಂಕಾ ಪ್ರಶಸ್ತಿ 
ದೇಶ

ಪತ್ರಿಕೋದ್ಯಮ ಕ್ಷೇತ್ರದ 27 ಸಾಧಕರಿಗೆ ರಾಮನಾಥ ಗೋಯಂಕಾ ಪ್ರಶಸ್ತಿ

ಪತ್ರಿಕೋದ್ಯಮ ದಿಗ್ಗಜ ರಾಮನಾಥ ಗೋಯಂಕಾ ಹೆಸರಿನಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುವ ವಾರ್ಷಿಕ ಪ್ರಶಸ್ತಿಗಳು ಘೋಷಣೆಯಾಗಿದೆ.

ನವದೆಹಲಿ: ಪತ್ರಿಕೋದ್ಯಮ ದಿಗ್ಗಜ ರಾಮನಾಥ ಗೋಯಂಕಾ ಹೆಸರಿನಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುವ ವಾರ್ಷಿಕ ಪ್ರಶಸ್ತಿಗಳು ಘೋಷಣೆಯಾಗಿದೆ. ಇದು 12ನೇ ಆವೃತ್ತಿಯ ಪ್ರಶಸ್ತಿಯಾಗಿದ್ದು ಒತ್ಟು 27 ಪತ್ರಕರ್ತರು ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ತಲಾ ಒಂದು ಲಕ್ಷ ನಗದು ಮತ್ತು ಪ್ರಶಸ್ತಿ ಫಲಕವನ್ನು ಹೊಂದಿರಲಿದೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ  ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶಸ್ತಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.  
ಪ್ರಶಸ್ತಿ ಪುರಸ್ಕೃತರ ಪಟ್ಟಿ
ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ-
ಜಮ್ಮು ಕಾಶ್ಮೀರ ಹಾಗೂ ಈಶಾನ್ಯದಿಂದ ವರದಿಗಾರಿಕೆ: ಅಭಿಷೇಕ್ ಸಹಾ, ಹಿಂದೂಸ್ತಾನ್ ಟೈಮ್ಸ್ 
ಹಿಂದಿ: ರಾಹುಲ್ ಕೊಟಿಯಾಲ್, ಸತ್ಯಾಗ್ರಹ್.ಸ್ಕ್ರಾಲ್.ಇನ್ 
ಪ್ರಾದೇಶಿಕ ಭಾಷೆ: ರೇಷ್ಮಾ ಸಂಜೀವ್ ಶಿವದೇಕರ್, ಲೋಕ್ ಸತ್ತಾ 
ಪರಿಸರ ಪತ್ರಿಕೋದ್ಯಮ: ಜಿಮ್ಮಿ ಫಿಲಿಪ್, ದೀಪಿಕಾ ಡೈಲಿ ಅನ್ ಕವರ್ ಇಂಡಿಯಾ ಇನ್ ವಿಸಿಬಲ್: ಎಸ್.ವಿ.ರಾಜೇಶ್, ಮಲಯಾಳ ಮನೋರಮಾ
ವಾಣಿಜ್ಯ ಹಾಗೂ ಆರ್ಥಿಕ ಪತ್ರಿಕೋದ್ಯಮ: ಉತ್ಕರ್ಷ್ ಆನಂದ್, ದ ಇಂಡಿಯನ್ ಎಕ್ಸ್ ಪ್ರೆಸ್
ರಾಜಕೀಯ ವರದಿಗಾರಿಕೆ: ಮುಜಮಿಲ್ ಜಲೀಲ್, ದ ಇಂಡಿಯನ್ ಎಕ್ಸ್ ಪ್ರೆಸ್ 
ಕ್ರೀಡಾ ಪತ್ರಿಕೋದ್ಯಮ: ಕೈಸರ್ ಮೊಹಮ್ಮದ್ ಅಲಿ, ಔಟ್ ಲುಕ್ 
ಕ್ರೀಡಾ ವರದಿಗಾರಿಕೆ: ಶುಭಜಿತ್ ರಾಯ್, ದ ಇಂಡಿಯನ್ ಎಕ್ಸ್ ಪ್ರೆಸ್ 
ತನಿಖಾ ವರದಿಗಾರಿಕೆ: ರಿತು ಸರಿನ್, ಪಿವಿ ಅಯ್ಯರ್ ಮತ್ತು ಜೆ ಮಜುಂದಾರ್, ದ ಇಂಡಿಯನ್ ಎಕ್ಸ್ ಪ್ರೆಸ್ 
ನುಡಿ ಚಿತ್ರ: ಸಂಗೀತಾ ಬರುವಾ ಪಿಶರೊತಿ, ದ ವೈರ್ 
ಭಾರತದ ಬಗ್ಗೆ ವರದಿ ಮಾಡುವ ವಿದೇಶಿ ಪ್ರತಿನಿಧಿ: ಎಲೆನ್ ಬಾರಿ, ದ ನ್ಯೂಯಾರ್ಕ್ ಟೈಮ್ಸ್ ಅಭಿಪ್ರಾಯ ಮತ್ತು ವ್ಯಾಖ್ಯಾನ ಬರಹ: ತಮಲ್ ಬಂಡೋಪಾಧ್ಯಾಯ, ಮಿಂಟ್ 
ನಾಗರಿಕ ಪತ್ರಿಕೋದ್ಯಮ: ಚೈತನ್ಯ ಮರ್ಪಕ್ ವರ್, ಮುಂಬೈ ಮಿರರ್ 
ಫೋಟೋ ಜರ್ನಲಿಸಮ್: ವಸೀಮ್ ಅಂದ್ರಾಬಿ, ಹಿಂದೂಸ್ತಾನ್ ಟೈಮ್ಸ್ 
ಪ್ರಸಾರ 
ಜಮ್ಮು ಕಾಶ್ಮೀರ ಹಾಗೂ ಈಶಾನ್ಯದಿಂದ ವರದಿಗಾರಿಕೆ: ಮೌಮಿತಾ ಸೆನ್, ಇಂಡಿಯಾ ಟುಡೆ ಹಿಂದಿ: ರವೀಶ್ ಕುಮಾರ್, ಎನ್ ಡಿಟಿವಿ ಇಂಡಿಯಾ 
ಪ್ರಾದೇಶಿಕ ಭಾಷೆ: ದಿನೇಶ್ ಅಕುಲಾ, ಟಿವಿ 5 ನ್ಯೂಸ್ 
ಪರಿಸರ ಪತ್ರಿಕೋದ್ಯಮ: ಯಾರಿಗೂ ಇಲ್ಲ 
ಅನ್ ಕವರ್ ಇಂಡಿಯಾ ಇನ್ ವಿಸಿಬಲ್: ಮನೋಗ್ಯ ಲೋಯಿವಾಲ, ಟಿವಿ ಟುಡೇ 
ವಾಣಿಜ್ಯ ಹಾಗೂ ಆರ್ಥಿಕ ಪತ್ರಿಕೋದ್ಯಮ: ಹರ್ಷದಾ ಸಾವಂತ್, ಸಿಎನ್ ಬಿಸಿ ಆವಾಜ್ ರಾಜಕೀಯ ವರದಿಗಾರಿಕೆ: ಆಶಿಷ್ ಸಿಂಗ್, ನ್ಯೂಸ್ ಎಕ್ಸ್ 
ಕ್ರೀಡಾ ಪತ್ರಿಕೋದ್ಯಮ: ಬಿಪಾಷಾ ಮುಖರ್ಜಿ, ಟಿವಿ ಟುಡೇ 
ಕ್ರೀಡಾ ವರದಿಗಾರಿಕೆ: ಆಶಿಷ್ ಸಿನ್ಹಾ, ಇಂಡಿಯಾ ನ್ಯೂಸ್ 
ತನಿಖಾ ವರದಿಗಾರಿಕೆ: ಶ್ರೀನಿವಾಸನ್ ಜೈನ್, ಎನ್ ಡಿಟಿವಿ 24X7

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT